ಮಾಳಿಂಗರಾಯ ದೇವಸ್ಥಾನ ಉದ್ಘಾಟನೆ 11 ರಂದು

 

ಕಲಬುರಗಿ ನ 8: ತಾಲೂಕಿನ ಯಳವಂತಗಿ  ( ಕೆ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮಾಳಿಂಗರಾಯ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನವೆಂಬರ್ 11 ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ ಎಂದು ತಾಪಂ ಮಾಜಿ ಸದಸ್ಯ  ದೇವಿಂದ್ರಪ್ಪ ನಾಯಿಕೋಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿ ,ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಕಾರ್ಯಕ್ರಮವನ್ನು  ಉದ್ಘಾಟಿಸುವರು. ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರು ಪೀಠದ ಸಿದ್ಧರಾಮನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಪೂಜ್ಯರ ತುಲಾಭಾರ ಕಾರ್ಯಕ್ರಮ ನಡೆಯಲಿದೆ.ಅನೇಕ ಜನಪ್ರತಿನಿಧಿಗಳು ಗಣ್ಯರು ಸಮಾಜದ ಬಂಧುಗಳು ಉಪಸ್ಥಿತರಿರುವರು ಎಂದರು..

Leave a Comment