ಮಾಲ್‌ನ ಲಿಫ್ಟ್ ಆಪರೇಟರ್ ನಾಪತ್ತೆ: ದೂರು ದಾಖಲು

ಮಂಗಳೂರು, ಡಿ.೩- ನಗರದ ಮಾಲ್‌ವೊಂದರಲ್ಲಿ ಲಿಫ್ಟ್ ಆಪರೇಟರ್‌ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ (೨೭) ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ನವೀನ್ ಅವರು ಫ್ಯುಜಿಟೆಕ್ ಇಂಡಿಯಾ ಕಂಪೆನಿಯಿಂದ ನಗರದ ಮಾಲ್‌ವೊಂದರಲ್ಲಿ ಲಿಫ್ಟ್ ಆಪರೇಟರ್‌ಆಗಿ ಕೆಲಸ ಮಾಡುತ್ತಿದ್ದರು. ನವೀನ್ ನ.೨೬ರಂದು ಬೆಳಗ್ಗೆ ೮ ಗಂಟೆಗೆ ಮಾಲ್‌ಗೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಕೆಲಸ ಮುಗಿಸಿ ಮನೆಗೆ ಬಾರದೇ ಇದ್ದರಿಂದ ಸಹೋದರ ಕರೆ ಮಾಡಿದಾಗ, ಮೈಸೂರಿಗೆ ಹೋಗುತ್ತೇನೆ’ ಎಂದು ಹೇಳಿದ್ದಾರೆ. ಆನಂತರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಮಾಲ್‌ನ ಸಿಬ್ಬಂದಿ, ಆತನ ಸ್ನೇಹಿತರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಹರೆ: ೫.೬ ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ತಲೆಯ ಮುಂಭಾಗ ಕೂದಲು ಉದುರಿದ್ದು, ಬೋಳಾಗಿದೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಂದು ಬಣ್ಣದ ಟಿ-ಶರ್ಟ್, ಬ್ಲಾಕ್ ಶೂ ಧರಿಸಿದ್ದರು. ಕನ್ನಡ, ತುಳು, ಇಂಗ್ಲಿಷ್, ಹಿಂದಿ ಮಾತನಾಡುತ್ತಾರೆ. ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಯಾವುದಾದರೂ ಮಾಹಿತಿ ಲಭಿಸಿದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ (೦೮೨೪- ೨೨೨೦೫೧೮, ೯೪೮೦೮೦೫೩೩೯) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Leave a Comment