ಮಾಲೇಕಲ್ ತಿರುಪತಿ ಲಕ್ಷ್ಮಿವೆಂಕಟರಮಣಸ್ವಾಮಿ ನಗರ ಪ್ರವೇಶ

ಅರಸೀಕೆರೆ, ಜು. ೧೬- ನಗರಕ್ಕೆ ಪ್ರವೇಶ ಮಾಡಿದ ಮಾಲೇಕಲ್ ಅಮರಗಿರಿ ತಿರುಪತಿಯ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯನ್ನು ನಗರಸಭೆ ಆಡಳಿತ ಹಾಗೂ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀದೇವಿ ಭೂದೇವಿ ಸಮೇತವಾಗಿ ವೆಂಕಟರಮಣಸ್ವಾಮಿಯ ಶ್ರದ್ಧಾಭಕ್ತಿಯಿಂದ ಜನತೆ ಸ್ವಾಗತ ಕೋರಿದರು

ಉತ್ಸವ ನಗರ ಪ್ರವೇಶಿಸಿದ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಪರಮೇಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷ ವಿದ್ಯಾದರ್, ಸದಸ್ಯರಾದ ರಾಜಶೇಖರ್, ಗಿರೀಶ್, ಮೇಲಗಿರಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment