ಮಾರ್ಚ್ 5 ಬಜೆಟ್ | ಮಾಧ್ಯಮಗಳಿಗೆ ಅವಕಾಶ ಇಲ್ಲ:

ಬೆಂಗಳೂರು.ಫೆ.14. ಮಾರ್ಚ್ 5 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈ ಬಾರಿ ಅಧಿವೇಶನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆಯ ಒಳಗೆ ಅವಕಾಶವಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿರುವ ಅವರು, ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯ ವ್ಯವಸ್ಥೆ ಇಲ್ಲೂ ಪಾಲಿಸಲಾಗುತ್ತದೆ ಎಂದರು.

ಫೆಬ್ರುವರಿ 17ರಿಂದ 31ರವರಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ.  ಮಾರ್ಚ್ 2 ಮತ್ತು 3ರಂದು ಸಂವಿಧಾನದ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ 5 ರಂದು ಬಜೆಟ್ ಮಂಡನೆ ಆಗಲಿದೆ ಎಂದರು. ಅಧಿವೇಶನದಲ್ಲಿ ಒಟ್ಟು 6 ಮಸೂದೆ ಮಂಡನೆ ಆಗಲಿವೆ. ಎಲ್ಲಾ ಸದಸ್ಯರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಗೇರಿ ತಿಳಿಸಿದ್ದಾರೆ.

Leave a Comment