ಮಾರ್ಚ್ 3ಕ್ಕೆ ಪುಟ್ಟರಾಜ ಸಮ್ಮಾನ ಪ್ರಶಸ್ತಿ ಪ್ರದಾನ

ಧಾರವಾಡ,ಮಾ.1-ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ(ರಿ) ಧಾರವಾಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಪದ್ಮವಿಭೂಷಣ ಡಾ.ಪುಟ್ಟರಾಜ ಗವಾಯಿಗಳ 107ನೇ ಜನ್ಮದಿನ ಸಂಗೀತೋತ್ಸವ ಹಾಗೂ ಪುಟ್ಟರಾಜ ಸಮ್ಮಾನ 2020 ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿ.3ನೇ ಮಾರ್ಚ 2020ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜನೆ ಮಾಡಿದೆ.
ಧಾರವಾಡದ ಶ್ರೀ ಮುರುಘಾಮಠದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸುವರು.  ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಧ್ಯಕ್ಷತೆ ವಹಿಸವರು.  ನಗರ ಪೊಲೀಸ್ ಆಯುಕ್ತ ಆರ್.ದಿಲೀಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಖ್ಯಾತ ನರರೋಗ ತಜ್ಞ ಡಾ.ಎಸ್.ಪಿ.ಬಳಿಗಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
2020ನೇ ಸಾಲಿನ ಪುಟ್ಟರಾಜ ಸಮ್ಮಾನ ಪ್ರಶಸ್ತಿಯನ್ನು ಬೆಂಗಳೂರಿನ ಗಾನಕಲಾಭೂಷಣ ಡಾ.ಕೆ.ವಾಗೀಶ ಅವರಿಗೆ ಪ್ರದಾನ ಮಾಡಲಾಗುವುದು.  ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ.
ನಂತರ ಬೆಂಗಳೂರಿನ ರುದ್ರೇಶ ಭಜಂತ್ರಿಯವರ ಷಹನಾಯಿ ವಾದನಕ್ಕೆ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ಅವರ ತಬಲಾ ಸಾಥ್ ಸಂಗತ್ ಹಾಗೂ ಬೆಂಗಳೂರಿನ ಗಾನಕಲಾಭೂಷಣ ಡಾ.ಕೆ.ವಾಗೀಶ ಅವರ ಕರ್ನಾಟಕ ಸಂಗೀತಕ್ಕೆ ವಯೋಲಿನದಲ್ಲಿ ಹೈದರಾಬಾದಿನ ವಿದ್ವಾನ ಸೂರ್ಯದೀಪ್ತಿ ಮೃದಂಗಂದಲ್ಲಿ, ಬೆಂಗಳೂರಿನ ವಿದ್ವಾನ ಆನೂರು ಅನಂತಕೃಷ್ಣ ಶರ್ಮ, ಕಂಜೇರಾದಲ್ಲಿ ವಿದ್ವಾನ ಸುನಾದ ಆನೂರು ಸಾಥ್ ಸಂಗತ್ ನೀಡಲಿದ್ದಾರೆ.  ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ, ಉಪಾಧ್ಯಕ್ಷ ಶಂಕರ ಕುಂಬಿ, ಖಚಾಂಚಿ ಪಂ.ಡಿ.ಕುಮಾರದಾಸ್ ಉಪಸ್ಥಿತರಿರುವರು ಎಂದು ಹಿರಿಯ ಗಾಯಕ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ವೆಂ.ವೆಂಕಟೇಶಕುಮಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment