ಮಾರುತಿರಾವ ಮಾಲೆ ನಾಮಕರಣಕ್ಕೆ ಆಗ್ರಹ

( ನಮ್ಮ ಪ್ರತಿನಿಧಿಯಿಂದ)
ಕಲಬುರಗಿ ಮೇ 19: ಕರ್ನಾಟಕ ವಿಧಾನಪರಿಷತ್ತಿಗೆ ಹಿರಿಯ ಕಾಂಗ್ರೆಸ್ಸಿಗ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಮಾರುತಿರಾವ ಮಾಲೆ ಅವರನ್ನು ನಾಮಕರಣ ಮಾಡುವಂತೆ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ದಳ ಆಗ್ರಹಿಸಿದೆ.
ರಾಜ್ಯಪಾ¯ರಿಗೆ ವಿಧಾನ ಪರಿಷತ್ತಿನ ನಾಮಕರಣಕ್ಕಾಗಿ ರಾಜ್ಯ ಸರಕಾರ ಶಿಫಾರಸ್ಸು ಮಾಡಿದ ಕೊಂಡಜ್ಜಿ ಮೋಹನ,ರಮೇಶಕುಮಾರ.ಸಿಎಂ ಲಿಂಗಪ್ಪ ಅವರ ಹೆಸರುಗಳಲ್ಲಿ ಸಿಎಂ ಲಿಂಗಪ್ಪ ಅವರ ಹೆಸರು ತಿರಸ್ಕಾರಗೊಂಡಿದೆ,
ಹೀಗಾಗಿ ಸಿಎಂ ಲಿಂಗಪ್ಪ ಸ್ಥಾನದಲ್ಲಿ ಹೈಕ ಭಾಗವೂ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಮಾರುತಿರಾವ ಮಾಲೆ ಅವರ ಹೆಸರನ್ನು ಸರಕಾರ ಶಿಫಾರಸ್ಸು ಮಾಡಬೇಕು ಎಂದು ರಾಜ್ಯ ಭ್ರಷ್ಟಾಚಾರ ನಿರ್ಮೂಲನ ದಳದ ರಾಜ್ಯ ವಕ್ತಾರರಾದ ಪ್ರೊ ಶಿವರಾಜ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದರು.
ವಿಧಾನಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳಲ್ಲಿ ಹೈಕಭಾಗದವರಿಗೆ ಸೂಕ್ತ ಸ್ಥಾನಮಾನವೇ ಇಲ್ಲ.ಇದರ ವಿರುದ್ಧ ಅನೇಕ ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗುತ್ತಿಲ್ಲ.
ಮಾರುತಿರಾವ ಮಾಲೆ ಅವರು ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಹೈಕ ಭಾಗದಲ್ಲಿ 42 ಶಾಲಾ ಕಾಲೇಜು, ತುಮಕೂರು,ಮಂಡ್ಯ,ಮೈಸೂರು, ಬೆಂಗಳೂರಿನಲ್ಲಿ 110 ಶಾಲಾಕಾಲೇಜು ನಡೆಸುತ್ತಿದ್ದಾರೆ. ದೀನದಲಿತ ಶೋಷಿತರ ಮಕ್ಕಳಿಗಾಗಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು
ಸುದ್ದಿಗೋಷ್ಠಿಯಲ್ಲಿ ಎ.ಎಸ್ ಭದ್ರಶೆಟ್ಟಿ, ಶಾಂತಾವಾಲಿ ಉಪಸ್ಥಿತರಿದ್ದರು.

Leave a Comment