ಮಾಯಮ್ಮನ ಮಹಾತ್ಮೆ ಜ್ಯೋತಿರ್ಗಮಯ

ಬಳ್ಳಾರಿ ಜಿಲ್ಲೆಯ ಕೂಡ್ಲಗಿಯ ಗಾಣಗಟ್ಟೆ ಮಾಯಮ್ಮ ಪವಾಡಗಳನ್ನು ಅನಾವರಣಗೊಳಿಸುವ ಭಕ್ತಿ ಪ್ರಧಾನ ಚಿತ್ರ ಜ್ಯೋತಿರ್ಗಮಯ’ ಸದ್ದಿಲ್ಲದೆ  ಪೂರ್ಣಗೊಂಡಿದೆ    ಹಾರರ್, ಥ್ರಿಲ್ಲರ್ ಚಿತ್ರಗಳ ಭರಾಟೆಯ ನಡುವೆ ಬಂದಿರುವ ಜ್ಯೋತಿರ್ಗಮಯ ಆಸ್ತಿಕರಿಗೆ ಇಷ್ಟವಾಗಲಿದೆ ಮಾಯಮ್ಮ ದೇವಿಗೆ ಹರಕೆ ಹೊತ್ತವರಿಗೆ ಅವರ ಇಷ್ಟಾರ್ಥ ಸಿದ್ದಿಸಲಿದೆ.ಈಗಿನ ಬಹುತೇಕ ಯುವಕರು ದೈವವನ್ನು ನಂಬದೆ, ಮಾಠಮಂತ್ರದ ಕಡೆ ಹೋದಾಗ ದೇವಿ ಯಾವ ರೀತಿ ಕಾಪಾಡುತ್ತದೆ.

ಈಕೆಯ ಪವಾಡಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು ನಿರ್ದೇಶಕ ಡಿವಿಜಿ ನಾಗರಾಜ್. ಬಳ್ಳಾರಿ, ಕೂಡ್ಲಗಿ ಗಾಣಗಟ್ಟೆ ಮಾಯಮ್ಮ ದೇವಾಲಯದ ಸುತ್ತ ಮುತ್ತ ಚಿತ್ರೀಕರಣ ನಡೆಸಿ ಸಿನೆಮಾವನ್ನು ಪೂರ್ಣಗೊಳಿಸಲಾಗಿದೆ.ಬಳ್ಳಾರಿ ಸುತ್ತಮುತ್ತ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಮಾಯಮ್ಮನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಬರಲಿದ್ದಾರೆ ಅವರಿಗೆ ಒಂದಲ್ಲ ಒಂದು ರೀತಿ ಒಳಿತಾಗಿದೆ ಒಳಿತಾದ ಇಬ್ಬರ ಜೀವನಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟು ಚಿತ್ರ ಮಾಡಲಾಗಿದೆ ಎನ್ನುತ್ತಾರೆ.

ಯುವಕನೊಬ್ಬನ ಮೇಲೆ ದುಷ್ಟಶಕ್ತಿಗಳು ಮಾಟಮಂತ್ರ ಪ್ರಯೋಗ ಮಾಡಿರುತ್ತಾರೆ ಆಯುವಕ ಸಮಸ್ಯೆಯ ಪರಿಹಾರಕ್ಕಾಗಿ ಗಾಣಗಟ್ಟೆಗೆ ಬಂದು ೪೦ದಿನಗಳ ಕಾಲ ವ್ರತ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾನೆ ಇದು ಕಾಲ್ಪಾನಿಕ ಕತೆ ಎನಿಸಿದರೂ ಮಾಯಮ್ಮ ಪವಾಡ ದೇವಿಯ ಭಕ್ತರಿಗಷ್ಟೆ ಗೊತ್ತು ಕತ್ತಲಿನಿಂದ ಬೆಳಕಿನಡೆಗೆ ಎನ್ನುವಂತೆ ಕತೆಯನ್ನು ಸಿದ್ದಪಡಿಸಲಾಗಿದೆ ಎಂದು ಕಳೆದ ಶನಿವಾರ ನಡೆದ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡರು.

ರಂಗಭೂಮಿಯಿಂದ ಬಂದವನಾಗಿದ್ದು, ಅವಕಾಶ ನೀಡಿದ್ದಕ್ಕೆ ನಿರ್ಮಾಪಕ,ನಿರ್ದೇಶಕರಿಗೆ ಕೃತಜ್ಞನಾಗಿದ್ದೇನೆ ಎಂದರು ನಾಗರಾಜ್.ನಾಯಕ  ಭೀಮೇಶ್‌ಗೆ ಇದು ಮೊದಲ ಚಿತ್ರ  ಉದ್ಯಮಿ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ರಥದ ಗಾಲಿ ನನ್ನ ಮೇಲೆ ಹೋದಂತೆ ಕನಸು ಬರುತ್ತಿದ್ದನ್ನು ಅಜ್ಜಿಗೆ ಹೇಳಿದಾಗ, ದೇವಿ ದರ್ಶನ ಪಡದುಕೊಂಡು ಬಾ ಅಂತ ಸಲಹೆ ನೀಡುತ್ತಾರೆ. ಅದರಂತೆ ಅಲ್ಲಿಗೆ ಬಂದಾಗ ಅರ್ಚಕರು ೪೨ ದಿನ ವೃತ ಮಾಡಿದರೆ ಸರಿಯಾಗುತ್ತದೆಂದು ಹೇಳುತ್ತಾರೆ.

ಆ ದಿನಗಳಲ್ಲಿ  ಪ್ರೀತಿ, ಕಷ್ಟ, ನಲಿವು ಎಲ್ಲವನ್ನು ಅನುಭವಿಸುತ್ತೇನೆ ಎಂದು ತಮ್ಮ ಪಾತ್ರವನ್ನು ಬಿಚ್ಚಿಟ್ಟರು. ಹಿನ್ನಲೆ ಸಂಗೀತ ಒದಗಿಸಿರುವ ಜೇಮ್ಸ್ ಆರ್ಕಿಟೆಕ್ಟ್, ಸಹ ನಿರ್ಮಾಪಕ ನಾಗಲಿಂಗಪ್ಪ,  ನೃತ್ಯ ನಿರ್ದೇಶಕ ರಾಜದೇವ್, ಕಲಾವಿದ ರೇವಣ್ಣಬಳ್ಳಾರಿ ಅವರು ಚಿತ್ರದಲ್ಲಿ ನೀಡಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ ಇದು ಅತ್ಯುತ್ತಮ ಚಿತ್ರವಾಗಲಿದೆ ಎನ್ನುತ್ತಾರೆ.ನಾಯಕಿ ಸಿಂಧೂರಾವ್ ಇದು ನಾನು ಬಣ್ಣ ಹಚ್ಚಿದ ಮೊದಲ ಸಿನಿಮಾವಾಗಿದೆ., ದೇವಿ, ಆತ್ಮ  ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ಸುದೀಪ್ ಅಭಿಮಾನಿಗಳ ಸಂಘದ
ಅಧ್ಯಕ್ಷ ರವೀಂದ್ರಸಿಂಗ್  ಸಿಡಿ ಬಿಡುಗಡೆಗೊಳೀಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ವಿನುಮನಸು ಅವರು ಚಿತ್ರದಲ್ಲಿರುವ ಐದು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿರ್ದೇಶಕರ ಮುಂದಿನ ಚಿತ್ರ ’ಕೆಟಿಜಿ ನಗರ’  ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು. ನಿರ್ಮಾಪಕ ಜಿ.ಗೋವಿಂದರಾಜು ಪರವಾಗಿ ಅಳಿಯ ಸುದೀಂದ್ರ ಹಾಜರಿದ್ದರು.

Leave a Comment