ಮಾಯಕೊಂಡ ವಿಧಾನಸಭಾ ಕ್ಷೇತ್ರ : ಚುನಾವಣೆ ಸಿದ್ದತೆ

ದಾವಣಗೆರೆ ಏ.16; ಮಾಯಕೊಂಡ(ಪ.ಜಾತಿ)ವಿಧಾನಸಭಾ ಕ್ಷೇತ್ರದ ಮತದಾನ ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯಾದ ಪಿ ವಿ ಪೂರ್ಣಿಮಾ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾ ತಯಾರಿ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಕೋಷ್ಟಿಯಲ್ಲಿ ಅವರು ಮಾತನಾಡಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,30,770 ಜನಸಂಖ್ಯೆ ಇದ್ದು, 117643 ಪುರುಷರು ಮತ್ತು 113127 ಮಹಿಳೆಯರಿದ್ದಾರೆ. ಈ ಪೈಕಿ ಕ್ಷೇತ್ರದಲ್ಲಿ ಒಟ್ಟು 186717 ಮತದಾರರ ಪೈಕಿ 95031 ಪುರುಷರು, 91683 ಮಹಿಳಾ ಮತದಾರರಿದ್ದಾರೆ. ಇತರೆ ಮತದಾರರು 3, 100 ಜನ ಸೇವಾ ಮತದಾರರಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ದಾವಣಗೆರೆ ತಾಲ್ಲೂಕಿನ 29 ಗ್ರಾ ಪಂ ಹಾಗೂ ಚನ್ನಗಿರಿ ತಾಲ್ಲೂಕಿನ 16 ಗ್ರಾ ಪಂ ಗಳಿದ್ದು, ಮಾಯಕೊಂಡ, ಆನಗೋಡು ಮತ್ತು ಬಸವಾಪಟ್ಟಣ-1 ಮತ್ತು 2 ರ ಹೋಬಳಿಗಳ ಮತದಾರರು ಇದ್ದಾರೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 239 ಮತಗಟ್ಟೆಗಳಿದ್ದು ಯಾವುದೇ ಹೆಚ್ಚುವರಿ ಮತಗಟ್ಟೆಗಳು ಇರುವುದಿಲ್ಲ. ಮಾ.27 ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ.
ಹೆಬ್ಬಾಳು ಟೋಲ್, ಕಾರಿಗನೂರು ಕ್ರಾಸ್, ಹೆಚ್ ಬಸಾಪುರ ಈ ಮೂರು ಕಡೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು 24*7 ಎಸ್‍ಎಸ್‍ಟಿ(ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂ) ತಂಡದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯನ್ನು ದಾವಣಗೆರೆ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿದ್ದು ಚುನಾವಣಾ ಅಧಿಸೂಚನೆಯಂತೆ ಏ.17 ರಿಂದ 24 ರವರೆಗೆ ಏ.18 ಮತ್ತು 24 ರಜಾ ದಿನ ಹೊರತು ಚುನಾವಣಾ ಪ್ರಕ್ರಿಯೆ ಕುರಿತು ದೂರುಗಳು ಇದ್ದಲ್ಲಿ ಸಾರ್ವಜನಿಕರು ತಾಲ್ಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂ ದೂರವಾಣ ಸಂಖ್ಯೆ: 08192-235344 (24*7)ಗೆ ದೂರು ನೀಡಬಹುದು. ಚುನಾವಣೆಯಲ್ಲಿ ಉಪಯೋಗಿಸಲಾಗುವ ಇವಿಎಂ ಮತ್ತು ಮತ ಖಾತ್ರಿಪಡಿಸುವ ಯಂತ್ರ ವಿವಿ ಪ್ಯಾಟ್ ಯಂತ್ರಗಳ ಉಪಯೋಗದ ಬಗ್ಗೆ ಅರಿವು ಮೂಡಿಸಲು ಹಾಗೂ ಸಾರ್ವಜನಿಕರಲ್ಲಿ ಗೊಂದಲಗಳನ್ನು ನಿವಾರಿಸಲು ಪ್ರಾತ್ಯಕ್ಷಿಕೆಗಳನ್ನು ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಸೆಕ್ಟರ್ ಅಧಿಕಾರಿಗಳ, ಮಾಸ್ಟರ್ ಟ್ರೈನರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳನ್ನೊಳಗೊಂಡಂತೆ ಏ. 3 ರಿಂದ 12 ರವರೆಗೆ ನಡೆಸಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನಿಯೋಜಿಸಿದ್ದು, ಇವರು 8 ರಿಂದ 10 ಮತಗಟ್ಟೆಗಳ ಜವಾಬ್ದಾರಿ ವಹಿಸುವರು ಹಾಗೂ ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರವನ್ನು ಇವರಿಗೆ ನೀಡಲಾಗಿದೆ. ಶೇ. 100 ಎಪಿಕ್ ಕವರೇಜ್ ಮಾಡಲು ಯತ್ನಿಸಲಾಗುತ್ತಿದೆ. ಪ್ರತಿದಿನ ಮತದಾರರ ಪಟ್ಟಿ ಅಪ್‍ಡೇಟ್ ಆಗುತ್ತಿರುತ್ತದೆ. ನಾಮಪತ್ರ ಸಲ್ಲಿಕೆ ಏಪ್ರಿಲ್ 17 ರಿಂದ ಆರಂಭವಾಗಲಿದ್ದು, ಒಬ್ಬ ಅಭ್ಯರ್ಥಿಯ ಜೊತೆ ಸ್ಥಳೀಯ ಮತದಾರರಾದ ಒಬ್ಬ ಸೂಚಕರು ಹಾಗೂ ಮೂರು ಜನ ಸೇರಿದಂತೆ ನಾಲ್ವರಿಗೆ ಒಳ ಪ್ರವೇಶಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿಯ 3 ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಾಮಪತ್ರ ಸಲ್ಲಿಸುವ ಕೇಂದ್ರದ ಸುತ್ತ 100 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಪರಿಗಣ ಸಲಾಗುತ್ತದೆ ಎಂದರು.
ಸೂಕ್ಷ್ಮ ಮತಗಟ್ಟೆಗಳು : ಹಿಂದಿನ ಚುನಾವಣೆಗಳನ್ನು ಆಧರಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನಾಲ್ಕು ಗ್ರಾಮಗಳಾದ ಗುಡ್ಡದ ಕೋಮಾರನಹಳ್ಳಿ, ಹಾಲುವರ್ತಿ, ಲೋಕಿಕೆರೆ ಮತ್ತು ಅತ್ತಿಗೆರೆಯನ್ನು ಸೂಕ್ಷ್ಮ ಗ್ರಾಮಗಳೆಂದು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ 40 ಮತಗಟ್ಟೆಗನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ, ಈ ಪ್ರದೇಶಗಳಲ್ಲಿ ತಾವು ಸೇರಿದಂತೆ ಎಲ್ಲ ಅಧಿಕಾರಿಗಳು ತೆರಳಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ವಿಡಿಯೋಗ್ರಫಿ, ಹೆಚ್ಚುವರಿ ಪೋಲಿಸ್ ನಿಯೋಜನೆ ಸೇರಿದಂತೆ ಇತರೆ ಸೂಕ್ತ ಕ್ರಮ ಜರುಗಿಸಿದ್ದು ಶೇ.100 ಮತದಾನ ಆಗುತ್ತದೆಂಬ ವಿಶ್ವಾಸವಿದೆ ಎಂದರು
ಮಸ್ಟರಿಂಗ್ & ಡಿ ಮಸ್ಟರಿಂಗ್ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 1300 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗಳಿಗೆ ಮೊದಲನೇ ಹಂತದ ತರಬೇತಿಯನ್ನು ಏ.22 ರಂದು ಮೋತಿವೀರಪ್ಪ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದು ಸೆಕ್ಟರ್ ಆಫೀಸರ್ಸ್ ಸಿಬ್ಬಂದಿಗಳಿ ತರಬೇತಿ ನೀಡುವರು.ಚುನಾವಣಾ ಸಿಬ್ಬಂದಿಗಳಿಗೆ ಒಟ್ಟು ನಾಲ್ಕು ಹಂತದಲ್ಲಿ ತರಬೇತಿ ನೀಡಲಿದ್ದೇವೆ. ಮೊದಲನೇ ಹಂತದಲ್ಲಿ ಏ.22, ಎರಡನೇ ತರಬೇತಿ ಮೇ.6 ರಂದು ಮೂರನೇ ತರಬೇತಿ ಮಸ್ಟರಿಂಗ್ ದಿನವಾದ ಮೇ11 ಮತ್ತು ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮೇ12 ರಂದು ಒಟ್ಟು ನಾಲ್ಕು ಬಾರಿ ತರಬೇತಿ ನೀಡಿ ಸುಗಮ ಮತದಾನಕ್ಕೆ ಸಜ್ಜುಗೊಳಿಸಲಾಗುವುದು. ಮಾಯಕೊಂಡದ ಎಂ ಎಸ್ ಶಾಸ್ತ್ರಿ ಎಂಬುವರು ನೀತಿ ಸಂಹಿತೆ ಉಲ್ಲಂಘಿಸಿದ್ದು ಪ್ರಕರಣ ದಾಖಲಿಸಿ ಎಫ್‍ಐಆರ್ ಆಗಿದೆ ಎಂದರು.
ಈ ಬಾರಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತದಾನದ ಸಾಮಾನ್ಯ ವೀಕ್ಷಕರಾಗಿ ಡಾ. ಬಿಜಯ್‍ಕೇತನ್ ಐಪಿಎಸ್ ಮೊ ಸಂ: 07894857455 ಹಾಗೂ ಎಕ್ಸ್‍ಪೆಂಡಿಚರ್ ವೀಕ್ಷಕರಾಗಿ ನಿರಂಜನ್ ಕುಮಾರ್ ಎ, ಮೊ ಸಂ: 9869053500 ಇವರು ಆಗಮಿಸುವರು.
ಈ ಕ್ಷೇತ್ರಕ್ಕೆ ಸಂಬಂಧಿಸಿದ ದೂರುಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಗಮನಕ್ಕೆ ತರಬಹುದಾಗಿದ್ದು ಈ ತಂಡದಲ್ಲಿ ಎಸ್ ಎಸ್ ಬಸವರಾಜು ಮೊ ಸಂ: 9480825623, ಜಿ ಆರ್ ವಿಜಯಾನಂದ ಮೊ ಸಂ: 9448841885, ಕೋದಂಡರಾಮ ಕೆ ಮೊ ಸಂ: 9448999338, ಗಿರೀಶ್ 9742019791 ಹಾಗೂ ಚುನಾವಣಾಧಿಕಾರಿ ಪೂಣ ್ಮಾ ಪಿ ವಿ 9900525708, ತಹಶೀಲ್ದಾರ್ ಕಾಂತರಾಜ್ 9895657080 ಇವರನ್ನು ಸಂಪರ್ಕಿಸಬಹುದು. ಪತ್ರಿಕಾಗೋಷ್ಟಿಯಲ್ಲಿ ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಕಾಂತರಾಜ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment