ಮಾಯಕೊಂಡ ಕನಕ ಸ್ಕೂಲ್‍ನಲ್ಲಿ ಕೃಷ್ಣ ಜನ್ಮಾಷ್ಠಮಿ

ದಾವಣಗೆರೆ.ಆ.25; ತಾಲ್ಲೂಕಿನ ಮಾಯಕೊಂಡ ಗ್ರಾಮದ ಕನಕ ಸೆಂಟ್ರಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ  ಶಾಲಾ ವಿದ್ಯಾರ್ಥಿಗಳಿಗೆ ಕೃಷ್ಣ ಮತ್ತು ರಾಧೆಯ ವೇಷಭೂಷಣಗಳ ಸ್ಪರ್ಧೆಯ ಸಮಾರಂಭ ಏರ್ಪಡಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ರೂಪದಲ್ಲಿ ವೇದಿಕೆ ಮೇಲೆ ಮನಸೆಳೆದರು. ಕನಕ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಅಣಬೇರು ಶಿವಮೂರ್ತಿ ಸಮಾರಂಭದ  ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಜಯಮ್ಮ, ಸಹ ಶಿಕ್ಷಕಿಯರಾದ ರುಕ್ಸಾನ ಬಾನು, ಶಿಲ್ಪ, ಲಕ್ಷ್ಮೀ ಮತ್ತು ಪೋಷಕರಾದ ಚನ್ನಬಸಪ್ಪ, ಮಾಲತೇಶ, ರಾಧಾ, ಶೀಲಾ, ರೇಣುಕ, ಮುಖಂಡರು ಭಾಗವಹಿಸಿದ್ದರು.

Leave a Comment