ಮಾನ್ಯತಾಳಾಗಿ ದಿಯಾ ಮಿರ್ಜಾ ಸಂಜಯ್‌ದತ್ ಜೀವನ ಕುರಿತ ಚಿತ್ರದಲ್ಲಿ ವಿಶೇಷ ಪಾತ್ರ

ಬಾಲಿವುಡ್ ನಟಿ ದಿಯಾ ಮಿರ್ಜಾ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಆಕೆ ನಟಿಸಿದ ಚಿತ್ರಗಳಿಗಿಂತ ಹೊಸ ಚಿತ್ರ ಆಕೆಯ ಪಾಲಿಕೆ ಭಿನ್ನ ಮತ್ತು ವಿಭಿನ್ನವಾಗಿದೆಯಂತೆ.

ಬಾಲಿವುಡ್ ನಟಿ ದಿಯಾ ಮಿರ್ಜಾ ಸಂಜಯ್ ದತ್ ಜೀವನ ಕುರಿತ ಚಿತ್ರದಲ್ಲಿ ಸಂಜಯ್ ಪತ್ನಿ ಮಾನ್ಯತಾ ಪಾತ್ರ ಮಾಡುತ್ತಿದ್ದಾರೆ. ಪಾತ್ರಕ್ಕಾಗಿ ಈಗಾಗಲೆ ಹಲವು ತಯಾರಿಯನ್ನೂ ಮಾಡಿಕೊಂಡಿದ್ದಾರೆ.

ಅರೆ ಅಂತಹುದೇನಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಸಹಜ. ಬಾಲಿವುಡ್ ನಟ ಸಂಜಯ್ ದತ್ ಜೀವನ ಕುರಿತ ಚಿತ್ರ ಮಾಡಲಾಗುತ್ತಿದ್ದು ಅದರಲ್ಲಿ ನಟಿ ದಿಯಾ ಮಿರ್ಜಾ ಸಂಜಯ್ ದತ್ ಅವರ ಈಗಿನ ಪತ್ನಿ ಮಾನ್ಯತಾ ಅವರ ಪಾತ್ರ ಮಾಡಿಸುತ್ತಿದ್ದಾರೆ.
ದಿಯಾ ಮಿರ್ಜಾ ಪಾಲಿಗೆ ಮಹತ್ವದ ಚಿತ್ರವಂತೆ. ಇದಕ್ಕಾಗಿ ಆಕೆ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅಲ್ಲದೆ ಸಂಜಯ್‌ದತ್ ಪತ್ನಿ ಮಾನ್ಯತಾ ಅವರನ್ನು ಭೇಟಿ ಮಾಡಿ ಸಾಕಷ್ಟು ವಿಷಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅದನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಸಂಜಯ್ ದತ್ ಅವರ ಅಪ್ಪ ಸುನೀಲ್ ದತ್ ಪಾತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಪರೇಶ್ ರಾವಲ್ ಮಾಡುತ್ತಿದ್ದಾರೆ. ಮಾಮೂಲಿಯಾದ ಚಿತ್ರಗಳಲ್ಲಿ ನಟಿಸುವುದಕ್ಕೆ ಇಲ್ಲವೇ ಪ್ರೇಮಕಥೆಯ ಚಿತ್ರಗಳಲ್ಲಿ ನಟಿಸುವುದಕ್ಕಿಂತ ಭಿನ್ನವಾದ ಚಿತ್ರ ಮತ್ತೊಬ್ಬರ ಜೀವನ ಆಧಾರಿತ ಚಿತ್ರದಲ್ಲಿ ಮಾಡುವಾಗ ಅನೇಕ ಸವಾಲು ಎದುರಿಸಬೇಕಾಗುತ್ತದೆ.
ಎಷ್ಟೇ ಅನುಭವ ಇದ್ದರೂ ಕೂಡ ಅಲ್ಪ ಸ್ವಲ್ಪ ತೊಂದರೆಯಾದರೂ ಹಾಗಲ್ಲ. ಹೀಗೆ ಮಾಡಬಹುದಿತ್ತು ಎಂದು ಹೇಳಿಬಿಡುತ್ತಾರೆ. ಇಂತಹ ಪಾತ್ರ ನಿಜಕ್ಕೂ ಸವಾಲಿನ ಕೆಲಸ ಎಂದಿದ್ದಾರೆ ದಿಯಾ ಮಿರ್ಜಾ.
ಚಿತ್ರದಲ್ಲಿ ನಟಿಸಲು ಪೂರಕವಾಗಿ ಸಂಜಯ್‌ದತ್ ಮತ್ತು ಮಾನ್ಯತಾ ಹಲವು ಸಲಹೆ ಸೂಚನೆ ನೀಡಿದ್ದಾರೆ ಅವುಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ನಟಿ, ನಿರ್ಮಾಪಕಿಯೂ ಆಗಿರುವ ದಿಯಾ ಮಿರ್ಜಾ ಹೇಳಿದ್ದಾರೆ. ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದ್ದು ಅದಕ್ಕಾಗಿ ಕಷ್ಟ ಪಡಲಾಗಿದೆ ಅದು ಸದ್ಯದಲ್ಲಿಯೇ ತೆರೆಯ ಮೇಲೆ ಬಂದಾಗ ನಮ್ಮ ಶ್ರಮ ಗೊತ್ತಾಗಲಿದೆ ಎನ್ನುತ್ತಾರೆ ಅವರು.

Leave a Comment