ಮಾನಸಿಕ ಅಸ್ವಸ್ಥ ಮಹಿಳೆ ಮರಕ್ಕೆ ನೇಣು

ಬೆಂಗಳೂರು, ಸೆ. ೧- ಚರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾನಸಿಕ ಖಿನ್ನತೆಗೊಳಗಾಗಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ವರ್ತೂರುಕೋಡಿ ಬಳಿ ನಡೆದಿದೆ.

ವರ್ತೂರು ಮುಖ್ಯರಸ್ತೆಯ ಚರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಕತ್ತ ಮೂಲದ ಎಲಿಜಬೆತ್ (25) ಆತ್ಮಹತ್ಯೆ ಮಾಡಿಕೊಂಡವರು.

ಹಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಎಲಿಜಬೆತ್‌ಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೂ ಸರಿಯಾಗಿ ಗುಣಮುಖರಾಗಲಿಲ್ಲ. ನಿನ್ನೆ ಬೆಳಿಗ್ಗೆ ಚರ್ಚ್‌ನಿಂದ ಕಾಣೆಯಾಗಿದ್ದ ಅವರು, ರಾತ್ರಿ ವರ್ತೂರು ಕೋಡಿ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿರುವ ವೈಟ್‌ಫೀಲ್ಡ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment