ಮಾನವ ಸಂಪನ್ಮೂಲ ಸದ್ಬಳಿಕೆಯಾದರೆ ದೇಶದ ಅಭಿವೃದ್ಧಿ ಸಾಧ್ಯ:ರಾಮ್ ಪ್ರಸಾತ್

ಬಳ್ಳಾರಿ, ಸೆ.4: ಒಂದು ದೇಶದಲ್ಲಿನ ಮಾನವ ಮತ್ತು ಪ್ರಕೃತಿಕ ಸಂಪನ್ಮೂಲದ ಸದ್ಬಳಕೆಯಾದರೆ ಆದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಚೀನಾ, ಜಪಾನ್ ಸಾಗಿವೆ. ಇದನ್ನೇ ನಾವು ಅನುಸರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಬಳ್ಳಾರಿ ಜಿಲ್ಲೆಯು ಸಾಕಷ್ಟು ಪ್ರಕೃತಿಕ ಮತ್ತು ಮಾನವ ಸಂಪತ್ತನ್ನು ಹೊಂದಿದೆ. ಅದರ ಸದ್ಬಳಕೆಯಾಗಬೇಕಿದೆಂದು ಅವರು ಇಂದು ನಗರದ ಹೋಟೆಲ್ ಅಲ್ಲಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೈಗಾರಿಕೆ, ಕೃಷಿ, ತೋಟಗಾರಿಕೆ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ಯೋಜನೆಯ ಸಂಪದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಳ್ಳಾರಿ ಜಿಲ್ಲೆಯಲ್ಲಿ ಭತ್ತ, ಬಾಳೆ, ಕಬ್ಬು, ಶೇಂಗಾ, ಅಂಜೂರ, ಪಪ್ಪಾಯಿ, ದಾಳಿಂಬೆ, ಹತ್ತಿ, ಈರುಳ್ಳಿ, ಮೆಕ್ಕೆ ಜೋಳ ಹೀಗೆ ಹತ್ತು ಹಲವು ಬೆಳೆ ಬೆಳೆಯುತ್ತಿದೆ. ಇವನ್ನು ನೇರವಾಗಿ ಮಾರಾಟ ಮಾಡುವ ಬದಲಾಗಿ ಮೌಲ್ಯವರ್ದಿತವಾಗಿ ಮಾಡಿ ಅಂದರೆ ಸಂಸ್ಕರಣೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ದೊರಕಲಿದೆಂದರು.

ಯುವಕರಲ್ಲಿನ ಜ್ಞಾನ, ಕೌಶಲ್ಯ ಮತ್ತು ಆಸಕ್ತಿಯನ್ನು ಸರಿಯಾಗಿ ಬಳಸಿಕೊಂಡು ಅವರಿಂದ ಉದ್ದಿಮೆಗಳನ್ನು ಆರಂಭಿಸಿದರೆ, ಒಂದು ಉದ್ದಿಮೆಯಿಂದ ನೂರು ಜನರಿಗೆ ಕೆಲಸ ಸಿಗಲಿದೆಂದರು.

ನಾವು ಆಧುನಿಕ ತಂತ್ರಜ್ಞಾನ ಮತ್ತು ಕಠಿಣ ಶ್ರಮದಿಂದ ದುಡಿಮೆಗೆ ಪ್ರಯತ್ನಿಸಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ 646 ಕೋಟಿ ರೂಪಾಯಿ ಬಂಡವಾಳ ಹೂಡಲು ಕಳೆದ ತಿಂಗಳು ಉದ್ದಿಮೆದಾರರಿಗೆ ಅನುಮತಿ ನೀಡಿದೆಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.

ನಂತರ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 125ಕ್ಕೂ ಹೆಚ್ಚು ಉದ್ದಮೆದಾರರು ರೈತರಿಗೆ ಕೃಷಿ ಸಂಸ್ಕರಣೆ ಉದ್ದಿಮೆಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್ ಸಂಪದ ಯೋಜನೆ ಮತ್ತು ಕಾಯ್ದೆ ಬಗ್ಗೆ ಕರ್ನಾಟಕ ಆಹಾರ ನಿಗಮದ ಜಂಟಿ ನಿರ್ದೇಶಕಿ ಅಂಬಿಕಾ, ಕೃಷಿ ಉದ್ದಿಮೆ ಅಭಿವೃದ್ಧಿ ನೀತಿ ಬಗ್ಗೆ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥಗೌಡ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಿದಾನಂದ ಅವರು ಮಾಹಿತಿ ನೀಡಿದರು.

Leave a Comment