ಮಾನವೀಯತೆ ಮೆರೆದ ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ವಜಾ..!

ಚಾಮರಾಜನಗರ: ಜ.12- ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಗ್ಲುಕೋಸ್ ಬಾಟಲ್ ಬದಲಿಸಿ ಮಾನವೀಯತೆ ಮೆರೆದಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.
ಸತೀಶ್ ಕೆಲಸ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್. ಜನವರಿ 8ರಂದು ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಸತೀಶ್ ರೋಗಿಗೆ ಗ್ಲುಕೋಸ್ ಬಾಟಲ್ ಬದಲಾಯಿಸಿದ್ದರು. ಈ ಮೂಲಕ ನರ್ಸ್ ಮಾಡುವ ಕೆಲಸವನ್ನು ಮಾಡಿ ಸತೀಶ್ ಮಾನವೀಯತೆ ಮೆರೆದಿದ್ದರು.
ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ಸತೀಶ್ ಅವರನ್ನು ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ತೆಗೆದು ಹಾಕಿದೆ. ಸತೀಶ್ ತನ್ನ ಕುಟುಂಬ ನಿರ್ವಹಣೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮೆಚ್ಚಿಕೊಂಡಿದ್ದರು. ಅಲ್ಲದೇ ಸಚಿವ ಪುಟ್ಟರಂಗಶೆಟ್ಟಿ ಅವರೇ ಸತೀಶ್‍ಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡಿಸಿದ್ದರು. ಈಗ ಜಿಲ್ಲಾಸ್ಪತ್ರೆಯ ಡೀನ್ ರಾಜೇಂದ್ರ ಹಾಗೂ ಸರ್ಜನ್ ರಘುರಾಮ್ ಅವರಿಂದಾಗಿ ಇದೀಗ ಸತೀಶ್ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಡೀನ್ ಹಾಗೂ ಸರ್ಜನ್ ಏಜೆನ್ಸಿಗೆ ಒತ್ತಡ ತರಿಸಿ ಸತೀಶ್‍ರನ್ನು ಕೆಲಸದಿಂದ ತೆಗೆಸಿದ್ದಾರೆ.

Leave a Comment