ಮಾನವೀಯತೆ ಮೆರೆದ ಯೋಧರು : ಗರ್ಭಿಣಿ ಮಹಿಳೆಗೆ ನೆರವು

ರಾಯ್‌ಪುರ, ಜ. ೨೨- ಗಡಿ ಕಾಯುವ ಯೋಧರ ಮಾನವೀಯ ಗುಣಗಳು ಮೇಲಿಂದ ಮೇಲೆ ಸಾಬೀತಾಗುತ್ತಿರುವ ಬೆನ್ನಲ್ಲೆ ಗರ್ಭಿಣಿ ಮಹಿಳೆಯೋರ್ವಳನ್ನು ೬ ಕಿ.ಮೀ ಹೊತ್ತೋಯ್ದು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ಈ ಹಿಂದೆ ಶೀತಗಾಳಿಯಲ್ಲಿ ನಡುಗುವ ವಾತಾವರಣದಲ್ಲಿ ಜಮ್ಮು-ಕಾಶ್ಮೀರದಲ್ಲಿ ಗರ್ಭಿಣಿ ಮಹಿಳೆಯೋರ್ವಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಕೈಜೋಡಿಸಿದ್ದ ಸಿಆರ್‌ಪಿಎಫ್ ಯೋಧರು ಮತ್ತೆ ಗರ್ಭಿಣಿ ಮಹಿಳೆಯನ್ನು ಅಡ್ಡೆಯಲ್ಲಿ ೬ ಕಿ.ಮೀ ಹೊತ್ತೊಯ್ಯುವ ಮೂಲಕ ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಬಿಜಾಪುರದ ಗ್ರಾಮೀಣ ಪ್ರದೇಶದ ಪಡೆದಾದಾದಲ್ಲಿನ ಗರ್ಭಿಣಿ ಮಹಿಳೆಯೊಬ್ಬರಿಗೆ ತುರ್ತಾಗಿ ಚಿಕಿತ್ಸೆ ಅಗತ್ಯ ಕಂಡುಬಂದಿದೆ.
ಆದರೆ, ಮಹಿಳೆಯನ್ನು ಕರೆದೊಯ್ಯಲು ಆ ಪ್ರದೇಶದಲ್ಲಿ ರಸ್ತೆ ಸಂಪರ್ಕವಿಲ್ಲ, ನಡೆದು ಹೋಗಬಹುದಾದ ಪರಿಸ್ಥಿತಿ ಇದೆ. ಸ್ಥಳಕ್ಕಾಗಿಮಿಸಿ ಸಿಆರ್‌ಪಿಎಫ್ ಯೋಧರು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿದ್ದಾರೆ.
ಮಹಿಳೆಯನ್ನು ಹಗ್ಗದ ಮಂಚದ ಮೇಲೆ ಮಲಗಿಸಿ ಅದನ್ನು ಅಡ್ಡೆಯಾಗಿ ರೂಪಿಸುವ ಮೂಲಕ ೬ ಕಿ.ಮೀ ದೂರ ಹೊತ್ತೊಯ್ದು ನಂತರ ರಸ್ತೆ ಸಂಪರ್ಕಿಸಿ ವಾಹನ ವ್ಯವಸ್ಥೆ ಕಲ್ಪಿಸಿ ಆಕೆಯನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಆರ್‌ಪಿಎಫ್ ಯೋಧರ ಈ ಕಾರ್ಯಕ್ಕೆ ದೇಶದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಯೋಧರ ಈ ಮಾನವೀಯ ಕಾರ್ಯಕ್ಕೆ ಈ ಹಿಂದೆ ಪ್ರಧಾನಮಂತ್ರಿ ನರೇಂದ್ರಮೋದಿಯವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Leave a Comment