ಮಾನವನ ದುರಾಸೆಯಿಂದ ಕಾಡು ನಾಶ

ಕೆ.ಆರ್.ಪೇಟೆ,ಆ.31- ಮಾನವನ ದುರಾಸೆಯಿಂದ ಕಾಡು ನಾಶವಾಗುತ್ತಿದೆ. ಇದರಿಂದ ನಮ್ಮ ಪರಿಸರ ಸಮತೋಲನವನ್ನು ಕಳೆದುಕೊಂಡು ಅನೇಕ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ ಇದಕ್ಕೆ ತಾಜಾ ಉದಾಹರಣೆ ಎಂದರೆ ಕೊಡಗಿನಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂ ಕುಸಿದ ಘಟನೆಗಳಾಗಿವೆ ಹಾಗಾಗಿ ಇನ್ನಾದರೂ ನಾವು ಮರಗಿಡಗಳನ್ನು ರಕ್ಷಿಸಬೇಕು ಪರಿಸರವನ್ನು ಉಳಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಎಂ. ಎನ್.ವಿಜಯಕುಮಾರ್ ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಕುವೆಂಪು ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಯುವ ಮುಖಂಡ ಮಂಜುನಾಥ್ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ ಪರಿಸರವನ್ನು ಉಳಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸರದ ನಾಶದ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಹುಟ್ಟು ಹಬ್ಬ, ವಿವಾಹ, ಶಾಲಾ ವಾರ್ಷಿಕೋತ್ಸವ, ಮನೆಯ ಗೃಹ ಪ್ರವೇಶ, ಊರಿನ ಹಬ್ಬಗಳ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯು ನಮಗೆ ಹಿಡಿಶಾಪ ಹಾಕುತ್ತದೆ ಹಾಗಾಗಿ ಮುಂದಿನ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಇಂದೇ ಪರಿಸರವನ್ನು ಉಳಿಸುವ ಸಂಕಲ್ಪ ಮಾಡಿ ಪ್ರತಿಯೊಬ್ಬರೂ ಅದ್ದರಿ ಹುಟ್ಟು ಹಬ್ಬವನ್ನು ಕೈಬಿಟ್ಟು ಸಸಿ ನೆಟ್ಟು ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆವಚಣೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ತಾಲೂಕು ಕುವೆಂಪು ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ಮಂಜುನಾಥ್ ಅವರು ಕುವೆಂಪು ಅವರ ಆಶಯದಂತೆ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಅಚರಣೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ. ಇದೇ ರೀತಿ ಎಲ್ಲರೂ ತಮ್ಮ ಹುಟ್ಟು ಹಬ್ಬದಂದು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ಉಳಿಸಲು ಕೈಜೋಡಿಸಬೇಕು ಎಂದು ವಿಜಯಕುಮಾರ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಹೆಚ್.ಆರ್.ನಾಗರಾಜೇಗೌಡ, ತಾಲೂಕು ಕುವೆಂಪು ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್.ಆರ್.ಸಜ್ಜನ್, ಯುವ ಮುಖಂಡರಾದ ಅನಿಲ್, ರವಿ, ಗಜ, ವಿಸ್ವಾಸ್, ರಘು, ಮಹೇಶ್, ರಮೇಶ್, ಹೊನ್ನೇನಹಳ್ಳಿ ವೇಣು, ಶ್ರೀನಿಧಿಶ್ರೀನಿವಾಸ್, ಟೆಂಪೋ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Comment