ಮಾಧ್ಯಮದವರಿಗೆ ಹೋಳಿಗೆ ಊಟ ಹಾಕಿಸುತ್ತೇನೆ

 

ಬೆಂಗಳೂರು,ಸೆ.12:ಸುದ್ದಿ ಮಾಧ್ಯಮದವರಿಗೆ ಹೋಳಿಗೆ ಊಟ ಹಾಕಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದ್ದಾರೆ. ಇಂದು ತಮಗೆ ಎದುರಾದ ಸುದ್ದಿಗಾರರಿಗೆ ಈ ಭರವಸೆ ನೀಡಿದ್ದಾರೆ ದೇವೇಗೌಡರು.
ಜಿಟಿ ದೇವೇಗೌಡ ಅವರು ಜೆಡಿಎಸ್‌ ಸಖ್ಯ ಕಡಿದುಕೊಂಡಿದ್ದಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ದೇವೇಗೌಡರು ಮೇಲಿನಂತೆ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ‘ಜಿಟಿ ದೇವೇಗೌಡ ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರೊಬ್ಬರೇ ಅಲ್ಲ ಅವರಂತಹಾ ಯಾರ ಬಗ್ಗೆಯೂ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.
ನನಗೆ ನನ್ನ ಮೇಲೆ ವಿಶ್ವಾಸವಿದೆ, ನನಗೆ ಸ್ವಾಭಿಮಾನವಿದೆ. ದೈವದಲ್ಲಿ ನಂಬಿಕೆ ಇದೆ, ನಾನು ಸ್ವಂತ ಬಲದಿಂದ ಪಕ್ಷ ಕಟ್ಟುತ್ತೇನೆ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ, ಆಗ ನಿಮಗೆಲ್ಲರಿಗೂ ಹೋಳಿಗೆ ಊಟ ಹಾಕಿಸುತ್ತೇನೆ’ ಎಂದು ದೇವೇಗೌಡ ಅವರು ಹೇಳಿದರು.
ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಿಂದ ಬಹುತೇಕ ದೂರ ಸರಿದಿದ್ದಾರೆ. ಈ ಮುಂಬರುವ ಉಪಚುನಾವಣೆಯಲ್ಲಿ ಹುಣಸೂರಿನಿಂದ ತಮ್ಮ ಮಗನನ್ನು ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕೆ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಬಳಿಕ ದೇವೇಗೌಡ ಅವರು ಪಕ್ಷ ಸಂಘಟನೆ ಬಗ್ಗೆ ತೀವ್ರ ಗಮನವಹಿಸಿದ್ದಾರೆ. ಜೆಡಿಎಸ್‌ ಹಿಡಿತದಲ್ಲಿದ್ದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕು ದೇವೇಗೌಡ ಅವರು ನಿಶ್ಚಯಿಸಿದ್ದು ಈ ಬಗ್ಗೆ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ.

Leave a Comment