ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ಧಿ ನಿರಾಧಾರ : ಸಚಿವ ಜಿ.ಟಿ.ಡಿ

ಮೈಸೂರು. ಜೂ.20- ದೇವೇಗೌಡರಾಗಲೀ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಲೀ, ಸಮಸ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಆಗಲೀ ಯಾವುದೇ ದೂರು ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ಧಿ ನಿರಾಧಾರ ಎಂದು ಉಸ್ತುವಾರಿ ಸಚಿವ ಜಿಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು ಕಾಂಗ್ರೆಸ್ ವಿರುದ್ದ ಹೈಕಮಾಂಡ್ ಗೆ ಯಾವುದೇ ದೂರು ನೀಡಿಲ್ಲ.ಎಲ್ಲಾರು ಅನ್ಯೂನ್ಯವಾಗಿದ್ದಾರೆ.ಸಚಿವ ಸಂಪುಟದಲ್ಲಿ ಪಕ್ಷೇತರರಿಗೆ ಅವಕಾಶ ಕೊಟ್ಟಿರುವವರ ಜೊತೆ ಸಿದ್ದರಾಮಯ್ಯ ಭಾಗವಹಿಸಿದ್ರು.ಸರ್ಕಾರ ನಡೆಸೋದಕ್ಕೆ ಅವಕಾಶ ಕೊಡಿ.ಎಲ್ಲಾ ರೀತಿ ತೊಡಕುಗಳನ್ನ ನಿವಾರಿಸೋಕೆ ಸಹಕಾರ ಕೊಡಿ ಅಂತ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತಾಡಿದ್ದೇವೆ.ಗ್ರಾಮ ವಾಸ್ತವ್ಯ ವಿಚಾರಕ್ಕೆ ಕುರಿತು ಮಾತನಾಡಲೂ ಹೊರಟಿದ್ರು ಅಷ್ಟೇ ಇನ್ನೇನು ರಾಜಕೀಯ ವಿಚಾರ ಮಾತಾಡಿಲ್ಲ.ಕಾಂಗ್ರೆಸ್ ಗೆ ಅಭದ್ರತೆ ಸೃಷ್ಟಿಸುವ ಅವಶ್ಯಕತೆ ಇಲ್ಲ.ಪ್ರೀತಿ ವಿಶ್ವಾಸದಿಂದ ಇರೋದು ನಮ್ಮ ಮುಂದಿನ ಗುರಿ.ಸಿದ್ದರಾನಯ್ಯ
ರಾಹುಲ್ ಗಾಂಧಿ ಭೇಟಿ ವಿಚಾರ.ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ಯಾವುದೇ ದೂರು ಕೊಟ್ಟಿಲ್ಲ.ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಕ್ಕೆ ಅವಲೋಕನೆಗಾಗಿ ತೆರಳಿದ್ರು.
ಜೊತೆಗೆ ಸೋಲಿನ ವರದಿ ಕೊಡುವುದಕ್ಕೆ ಭೇಟಿ ಕೊಟ್ಟಿದ್ದರು ಎಂದು ಜಿಟಿಡಿ ಸ್ಪಷ್ಟನೆ ನೀಡಿದ್ರು.ಐಎಂಎ ವಿಚಾರ ೧೬೦೦ ಕ್ಕೂ ಹೆಚ್ಚು ದೂರುಗಳು ಸ್ವೀಕಾರವಾಗಿದೆ.ಈ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸಿಎಂ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.ಅದೇ ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದರು‌.

Leave a Comment