ಮಾಧಕ ವಸ್ತು  ಕರಾಳಮುಖ ರಾಕ್‌ಲೈನ್ ಸಮಾಜಮುಖಿ

ತರಬೇತಿ ಸಂಸ್ಥೆ
ಕಲಾವಿದರ ಸಂಘದಲ್ಲಿ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಆರಂಭಿಸುವ ಉದ್ದೇಶವಿದೆ. ಈಗಾಗಲೇ ಪುಣೆ ಫಿಲ್ಮ್ ಇನ್ಸ್ಟಿಟೂಟ್‌ನೊಂದಿಗೆ ಮಾತುಕತೆ ನಡೆಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಕೋರ್ಸ್ ಆರಂಬಿಸುವ ಉದ್ದೇಶವೂ ಇದೆ. ಕಲಾವಿದರ ಸಂಘ ಈ ಮಟ್ಟಕ್ಕೆ ಬರಲು ಹಿರಿಯರಾದ ಅಂಬರೀಷ್ ಅವರೇ ಕಾರಣ. ಅವರು ಮನಸ್ಸು ಮಾಡದಿದ್ದರೆ ಯಾವುದೂ ಆಗುತ್ತಿರಲಿಲ್ಲ

ಕನ್ನಡದಲ್ಲಿ ಒಟ್ಟೊಟ್ಟಿಗೆ ಎರಡು ಚಿತ್ರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮತ್ತೊಮ್ಮೆ ಬಾಲಿವುಡ್‌ಗೆ ಹಾರಲು ಮುಂದಾಗಿದ್ದಾರೆ.

ಮಹಿಳಾಮಣಿಗಳೇ ಪ್ರಧಾನವಾಗಿರುವ ಚಿತ್ರದ ಮೂಲಕ ಸಾಮಾಜಿಕ ಕಳಕಳಿ ಬಿಂಬಿಸುವ ಪ್ರಯತ್ನ ಮಾಡಿದ್ದರೆ ಮತ್ತೊಂದೆಡೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಟ ಸಾರ್ವಭೌಮ ಚಿತ್ರ ನಿರ್ಮಾಣದ ಹಂತದಲ್ಲಿದೆ. ಈ ನಡುವೆ ಅನುರಾಗ್ ಕಶ್ಯಪ್ ಅವರೊಂದಿಗೆ ಬಾಲಿವುಡ್‌ನಲ್ಲಿ ಚಿತ್ರ ಮಾಡುವ ಉದ್ದೇಶವೊಂದಿದ್ದಾರೆ.
ಯಾವುದೇ ಕೆಲಸ ಮಾಡಿದರೂ ಪ್ರಚಾರಕ್ಕಿಂತ ಕೆಲಸಕ್ಕೆ ಹೆಚ್ಚು ಒತ್ತು ನೀಡುವ ವ್ಯಕ್ತಿತ್ವ ರಾಕ್‌ಲೈನ್ ವೆಂಕಟೇಶ್ ಅವರದು. ಹೀಗಾಗಿಯೇ ಅವರು ಯಾವುದೇ ಕೆಲಸ ಮಾಡಿದರೂ ಸದ್ದುಗದ್ದವಿಲ್ಲದೆ ಮುಗಿಸುತ್ತಾರೆ. ಮಾತಿಗಿಂತ ಕೆಲಸವೇ ಮಾತನಾಡಬೇಕು ಎನ್ನುವುದಲ್ಲಿ ನಂಬಿಕೆ ಇಟ್ಟವರು.ಸಿನಿಮಾ ಅಂದರೆ ಬರೀ ದುಡ್ಡು ಮಾಡುವುದಷ್ಟೇ ಅಲ್ಲ. ಸಾಮಾಜಿಕ ಕಳಕಳಿಯೂ ಹೌದು. ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಮಹಿಳಾ ಮಣಿಗಳು ಪ್ರಧಾನವಾಗಿರುವ ಚಿತ್ರದಲ್ಲಿ ಮಾದಕ ದ್ರವ್ಯದ ಮುಖ ಅನಾವರಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕಿನ್ನು ಹೆಸರಿಟ್ಟಿಲ್ಲ. ಚಿತ್ರ ಚಿತೀಕರಣ ಮುಗಿಸಿದ್ದು ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರುವ ಉದ್ದೇಶವೊಂದಿದ್ದಾರೆ. ಶ್ರೀಮಂತ ಮಕ್ಕಳು ಮಾಧಕ ದ್ರವ್ಯದ ವ್ಯಸನಿಯಾಗಿ ಪಡುವ ಕಷ್ಟಗಳನ್ನು ಮತ್ತು ಸಮಾಜದಲ್ಲಿ ಕಂಡ ದೃಶ್ಯಗಳನ್ನು ಚಿತ್ರರೂಪದಲ್ಲಿ ಕಟ್ಟಿಕೊಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಸೇರಿ ಮೂವರು ಮಹಿಳಾ ಮಣಿಗಳೇ ಪ್ರಧಾನಭೂಮಿಕೆಯಲ್ಲಿದ್ದಾರೆ.
ಯುವ ಜನತೆಗೆ ಚಿತ್ರದ ಮೂಲಕ ಸಂದೇಶ ನೀಡುವ ಕೆಲಸ ಮಾಡಲಾಗಿದೆ. ಮುಂದಿನ ಪೀಳಿಗೆ ಮತ್ತು ಫ್ಯಾಮಿಲಿಯನ್ನು ರಕ್ಷಣೆ ಮಾಡುವ ಜವಬ್ದಾರಿಯ ಹಿನ್ನೆಲೆಯಲ್ಲಿ ಅರಿವು ಮೂಡಿಸುವ ಚಿತ್ರವಾಗಲಿದೆ ಎಂದರು ರಾಕ್‌ಲೈನ್ ವೆಂಕಟೇಶ್.
ಇನ್ನೂ ಪುನೀತ್ ರಾಜ್‌ಕುಮಾರ್ ಅವರ ನಟಸಾರ್ವಭೌಮ ಚಿತ್ರ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು ಎರಡು ಹಾಡುಗಳನ್ನು ಪೂರ್ಣಗೊಳಿಸಿದ ಬಳಿಕ ದೀಪಾವಳಿ ವೇಳೆಗೆ ಚಿತ್ರವನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆದಿದೆ.
ಇತ್ತೀಚೆಗೆ ಕನ್ನಡದಲ್ಲಿ ವಾರಕ್ಕೆ ಏಳೆಂಟು ಸಿನಿಮಾ ತೆರೆಗೆ ಬರುತ್ತಿವೆ. ಯಾವೊಂದು ಚಿತ್ರಗಳು ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಇನ್ನೂ ಒಂದು ವರ್ಷ ಹೀಗೆ ಮುಂದುವರಿಯಲಿದೆ. ಸ್ಟಾಕ್ ಇರುವ ಸಿನಿಮಾ ಮುಗಿಯಬೇಕಲ್ಲವೇ ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ಬಹುತಾರಾಗಣದ ಚಿತ್ರಗಳು ಬರಬೇಕು ಆದರೆ ಸ್ಟಾರ್‌ಗಳ ಬೇಡಿಕೆ ಕಡಿಮೆಯಾದರೆ ತಾನಾಗಿಯೇ ಬಹುತಾರಾಗಣದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಲ್ಲಿಯವರೆಗೂ ನಾವೆಲ್ಲಾ ಕಾಯಬೇಕು ಅಷ್ಟೇ.

ದೊಡ್ಡ ನೆರವು

ಕೊಡಗು ಸಂತಸ್ತ್ರರಿಗೆ ಚಿತ್ರರಂಗದಿಂದ ದೊಡ್ಡ ಮಟ್ಟದಲ್ಲಿ ನೆರವು ನೀಡಲು ಮುಂದಾಗಿದ್ದು, ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ನಟ ಅಂಬರೀಷ್ ಅವರ ನೇತೃತ್ವದಲ್ಲಿ ಸದ್ಯದಲ್ಲಿಯೇ ಸಭೆ ನಡೆಸಿ ಯಾವ ರೀತಿ ನೆರವು ನೀಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎನ್ನುತ್ತಾರೆ ರಾಕ್‌ಲೈನ್ ವೆಂಕಟೇಶ್.

 

Leave a Comment