ಮಾದಿಗ ಸಮಾಜದವರು ಇತಿಹಾಸ ನಿರ್ಮಾಣದ ವಂಶಸ್ಥರು

ದಾವಣಗೆರೆ, ಆ. ೧೩- ಮಾದಿಗರ ಸಂಸ್ಕೃತಿ ಶ್ರೇಷ್ಠವಾದದ್ದು, ಇಂತಹ ಸಂಸ್ಕೃತಿ ಬೇರೆ ಯಾವ ಜಾತಿಗಳಲ್ಲಿ ಕಾಣಲು ಸಾಧ್ಯವಿಲ್ಲವೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಮತ ಬಿ. ದೇಶ್ ಮಾನೆ ಹೇಳಿದರು.
ನಗರದ ಕುವೆಂಪು ಕನ್ನಡಭವನದಲ್ಲಿಂದು ಪರಿವರ್ತನಾ ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ಹಾಗೂ ಮಾದಿಗ ಪರಿವರ್ತನ ಬಳಗದಿಂದ ಆಯೋಜಿಸಿದ್ದ 2016-17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ತಾಲ್ಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಧರೆಯ ದೊರೆ ಕಿರುಹೊತ್ತಿಗೆ ಲೋಕಾರ್ಪಣೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ರವರ ಚಿಂತನೆಗಳನ್ನು ದೇಶದಲ್ಲಿ ಅಳವಡಿಸಿಕೊಳ್ಳದೇ ಹೋದರೆ ಕತ್ತಲೆಯ ಬದುಕು ಬದುಕಾಗುತ್ತದೆ. ಶಿಕ್ಷಣದ ಅರಿವು ಮೂಡಿಸಿದ ಮಹಾನ್ ಕ್ರಾಂತಿ ಅಂಬೇಡ್ಕರ್, ಪ್ರೊ. ಬಿ. ಕೃಷ್ಣಪ್ಪನವರು ಸಮತವಾದ ಚಿಂತನೆ ನೀಡಿದ್ದಾರೆ. ಡಾ. ಅಂಬೇಡ್ಕರ್ ರವರು ದೇಶಕ್ಕೆ ಪ್ರಸಿದ್ದವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ನಮ್ಮ ಸಮಾಜ ಯಾವ ಸಮಾಜವನ್ನು ವಿರೋಧಿಸುವುದಿಲ್ಲ. ನಾವು ಮೀಸಲಾತಿ ಹಾಗೂ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ. ಸ್ವಾಮಿ ವಿವೇಕಾನಂದ ಹೇಳಿದಂತೆ ನಾವು ನಿಂತ ನೀರಾಗಬಾರದು ನಿರಂತರ ಅಧ್ಯಾಯನದ ಮೂಲಕ ಜ್ಞಾನವಂತರಾಗಬೇಕು. ಡಾ. ಅಂಬೇಡ್ಕರ್ ರವರು ವಿಶ್ವ ಮಾನ್ಯತೆ ಹೊಂದುವುದರ ಮೂಲಕ ಸಮಾಜಕ್ಕೆ ವಿಶ್ವಮಾನ್ಯತೆ ಕಲ್ಪಿಸಿಕೊಟ್ಟಿದ್ದಾರೆ ಎಂದ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್. ಆಂಜನೇಯ ಅವರು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದೇಶಿ ವಿವಿಗಳಲ್ಲಿ ಅಧ್ಯಾಯನ ಮಾಡುವುದಕ್ಕಾಗಿ ಸಮಾಜದ 50 ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತಿತ್ತು. ಈ ಬಾರಿ 100 ಜನ ವಿದ್ಯಾರ್ಥಿಗಳನ್ನು ವಿದೇಶಿ ವಿವಿಗಳಲ್ಲಿ ಅಧ್ಯಾಯನ ಮಾಡುವುದಕ್ಕೆ ಆಯ್ಕೆ ಮಾಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಐಎ ಎಸ್., ಐಪಿಎಸ್, ಕೆ.ಎಸ್ ಸ್ಪರ್ಧಾತ್ಮಕ ಹುದ್ದೆಗಳನ್ನು ಮಾಡಲು ಮುಂದೆ ಬರಬೇಕು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಇಲ್ಲವಾದರೆ ಸಮಾಜ ನಮ್ಮನ್ನು ಕ್ಷಮಿಸುವುದಿಲ್ಲ. ವಿದ್ಯಾವಂತರಿಗೆ ಎಲ್ಲಾ ಸಾಧನೆ ಮಾಡಲು ಸಾಧ್ಯವಿದೆ. ಕೇವಲ ಮೊಬೈಲ್ ಗಳ ದಾಸರಾಗದೇ ನಿರಂತರ ಅಧ್ಯಾಯನ ಮಾಡಬೇಕು. ಸಂಸ್ಕೃತಿ, ಸಂಸ್ಕಾರವನ್ನು ಗೌರವಿಸುವುದರ ಜೊತೆಗೆ ರಾಜಕೀಯವಾಗಿ ಉನ್ನತ ಶಿಕ್ಷಣ ಪಡೆಯುವಲ್ಲಿ ಮುಂದಾಗಬೇಕು. ಮೌಢ್ಯತೆಯನ್ನು ವಿರೋಧಿಸಬೇಕು. ಮಾದಿಗ ಸಮಾಜವು ಇತಿಹಾಸ ನಿರ್ಮಾಣದ ವಂಶಸ್ಥರು ಎಂದರು.
ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಹೇ‌ಡಿಗಳಾಗಬಾರದು ನ್ಯಾಯಯುತವಾಗಿ ಹೋರಾಟ ಮಾಡಬೇಕು. ಸಮಾಜದ ವಿದ್ಯಾರ್ಥಿಗಳು ಅಸ್ತಿಗಳಾಗದೇ ಆಸ್ತಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಇತಿಹಾಸ ಪ್ರಾಧ್ಯಾಪಕ ಹಾಗೂ ಸಮಾಜದ ಚಿಂತಕ ಪ್ರೊ.ಟಿ. ರಾಜಪ್ಪ, ಕೆ. ಮಂಜುನಾಥ್, ತಿಪ್ಪೇಸ್ವಾಮಿ ಕಾತ್ರಿಕೆಹಟ್ಟಿ, ಶಂಕರ್, ಲಕ್ಷ್ಮಿಕಾಂತ್ ಕೆ.ಜಿ, ಮೋಹನ್ ಕುಮಾರ್, ನಾಗರಾಜ್ ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Leave a Comment