ಮಾದಿಗಪರ ಹೋರಾಟಗಾರರ ಸಂಭ್ರಮಾಚರಣೆ

ಕೊರಟಗೆರೆ, ಮಾ. ೧೪- ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ನಡೆದ ಜನಾಶೀರ್ವಾದ ಯಾತ್ರೆಗೆ ಬಂದ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ ಮಾಡಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ಮಾದಿಗ ಪರ ಹೋರಾಟಗಾರರು ಪಟ್ಟಣದಲ್ಲಿ ಸಂಭ್ರಮ ಆಚರಣೆ ಮಾಡಿದರು.

ಮಾದಿಗ ದಂಡೋರ ಮಾದಿಗಪರ ಸಂಘಟನೆಗಳಿಂದ ನ್ಯಾಯಮೂರ್ತಿಎ.ಜೆ.ಸದಾಶಿವ ಆಯೋಗ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಒತ್ತಾಯಿಸಿ ಪಟ್ಟಣದಲ್ಲಿ ನಡೆದ ಜನಾಶೀರ್ವಾದ ಸಮಾರಂಭಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಜನಾಂಗಕ್ಕಾಗಿ ಹೋರಾಟ ಮಾಡಿ ಬಂಧನಕ್ಕೆ ಒಳಗಾಗಿ ನಂತರ ಬಿಡಿಗಡೆಯಾಗಿ ಹೊರಬಂದ ಮಾದಿಗ ಜನಾಂಗದ ಹೋರಾಟಗಾರರಿಗೆ ಪಟಾಕಿ ಸಿಡಿಸಿ ಸ್ವಾಗತಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಯುವಸೇನೆ ಜಿಲ್ಲಾ ಅಧ್ಯಕ್ಷ ನಾಗರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೇಬಲ್ ರಘು, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಆಟೋ ಶಿವರಾಜ್, ಉಪಾಧ್ಯಕ್ಷ ಸೋರೆಕುಂಟೆ ಯೋಗೀಶ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ನರಸರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಂಧಿರಾಜ್, ಪಾತಗಾನಹಳ್ಳಿ ಸಿದ್ದಗಂಗಯ್ಯ, ಸಿದ್ದೇಶ್, ಮಂಜುನಾಥ್, ಯೋಗೀಶ್ ಮತ್ತಿತರರನ್ನು ಗೌರವಿಸಲಾಯಿತು.

Leave a Comment