ಮಾದಾರ ಚನ್ನಯ್ಯ ಜಯಂತ್ಯುತ್ಸವ 12 ರಂದು

ಕಲಬುರಗಿ ಡಿ 3: ಅಖಿಲ ಕರ್ನಾಟಕ ಬಸವ ಮಾದಾರ ಚನ್ನಯ್ಯ ಸಂಘದ ವತಿಯಿಂದ ಡಿಸೆಂಬರ್ 12 ರಂದು ಬೆಳಿಗ್ಗೆ 11.30 ಕ್ಕೆ ಶಹಬಾದ ರಸ್ತೆ ಮಾದಾರ ಚನ್ನಯ್ಯ ಭವನದಲ್ಲಿ ಶಿವಶರಣ  ಮಾದಾರ ಚನ್ನಯ್ಯ ಜಯಂತಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಂಬಣ್ಣಾ ಹೋಳಕುಂದಾ ಮತ್ತು ದಶರಥ ಕಲಗುರ್ತಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಲಿದ್ದು,ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು,ಕೂಡಲಸಂಗಮ ಪಂಚಮಸಾಲಿ ಪೀಠದ  ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು  ಸಾನಿಧ್ಯ ವಹಿಸುವರು. ಸಂಬಣ್ಣ ಹೋಳಕುಂದಾ ಅವರ ಅಭಿನಂದನಾ ಗ್ರಂಥ (ಚನ್ನಯ್ಯನ ಮಗ ನಾನಯ್ಯ ) ವನ್ನು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಬಿಡುಗಡೆ ಮಾಡುವರು. ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ ಮುಡಬಿ ಅಧ್ಯಕ್ಷತೆ ವಹಿಸುವರು. ಮಾದಾರ ಚನ್ನಯ್ಯ ಜೀವನ ಚರಿತ್ರೆ ಕುರಿತು ಸಂತೋಷ ಹೂಗಾರ , ಅಭಿನಂದನಾ ಗ್ರಂಥ ಕುರಿತು ಕುಪೇಂದ್ರ ಪಾಟೀಲ ಮಾತನಾಡುವರು.  ಸಮಾಜದ ನಿವೃತ್ತ ನೌಕಕರ ಮತ್ತು ಯುವ ಪ್ರತಿಭೆಗಳ ಸನ್ಮಾನ ಇದೇ ಸಂದರ್ಭದಲ್ಲಿ ನಡೆಯಲಿದೆ. ಜಿ ರಾಮಕೃಷ್ಣ,ಕೆ.ಬಿ ಶಾಣಪ್ಪ,  ನಾಗರಾಜ ಗುಂಡಗುರ್ತಿ,ಗೀತಾ ರಾಜು ವಾಡೇಕರ್,ಚಂದ್ರಿಕಾ ಪರಮೇಶ್ವರ, ಬಾಬು ಸುಂಠಾಣ ಶಾಮ ನಾಟಿಕಾರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರವಿ,ಗುರುನಾಥ ಸಿಂಗೆ,ಅನಿಲಕುಮಾರ, ರಾಜು ಕಟ್ಟಿ ಸೇರಿದಂತೆ ಹಲವರಿದ್ದರು..

Leave a Comment