ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ ಯುವ ಸಮೂಹ

ದಾವಣಗೆರೆ.ಜ.12; ಯುವಸಮೂಹ ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆ ಮಾಡಬೇಕಾದ ವೈದ್ಯರೇ ಇಂದು ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿರುವುದು ವಿಷಾಧಕರ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಜಿ ಹೇಳಿದರು.
ನಗರದ ಬಿಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ 156 ನೇ ಜನ್ಮದಿನೋತ್ಸವ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಬಾಲ್ಯ,ಯೌವ್ವನ, ಮುಪ್ಪು ಈ ಮೂರು ಘಟ್ಟದಲ್ಲಿ ಯೌವ್ವನ ಪ್ರಮುಖವಾದ ಘಟ್ಟ. ದೇವರು ಎಲ್ಲರಿಗೂ ಜ್ಞಾನ ಕೊಟ್ಟಿರುತ್ತಾನೆ ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಯುವಕರು ಮಾದಕ ವಸ್ತುಗಳಿಂದ ದೂರ ವಿರಬೇಕು ಉತ್ತಮ ಅಭ್ಯಾಸಗಳ ಮೂಲಕ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಸ್ವಾಮಿ ವಿವೇಕಾನಂದ ಅವರನ್ನು ಮಾರ್ಗದರ್ಶಕರನ್ನಾಗಿಟ್ಟು ಕೊಂಡಾಗ ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಅವರು ಕೇವಲ 39 ವರ್ಷಗಳ ಕಾಲ ಮಾತ್ರ ಬದುಕಿದ್ದರು. ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತ ದೇಶದ ಹೆಮ್ಮೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ತೋರಿಸಿಕೊಟ್ಟರು ಆಗ ಭಾರತದ ಬಗ್ಗೆ ಹೊರದೇಶಗಳಲ್ಲಿ ಅಭಿಮಾನ ಮೂಡಿತ್ತು ಅಂತಹ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎಂದರು.ಜೀವನದಲ್ಲಿ ಉತ್ತಮ ವಿದ್ಯಾವಂತರಾಗಿ ವೈದ್ಯರು,
ಎಂಜಿನಿಯರ್, ವಕೀಲರಾಗುವ ಮೂಲಕ ನೀವು ಮಾಡುವ ಕೆಲಸದಲ್ಲಿ ದೇಶ ಪ್ರೇಮ, ಬಡವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.ಆಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.
ನ್ಯಾ.ಕೆಂಗಬಾಲಯ್ಯ ಮಾತನಾಡಿ ಮಾದಕ ವಸ್ತುಗಳಲ್ಲಿ ಮೊಬೈಲು ಕೂಡ ಒಂದಾಗಿದೆ. ಯುವ ಸಮೂಹ ಮೋಬೈಲ್ ಗಳಿಗೆ ದಾಸರಾಗಿದ್ದಾರೆ. ಸ್ವಾಮಿ ವಿವೇಕಾನಂದ ಅವರ ಜನ್ಮದಿನಾಚರಣೆ ಮಾಡುತ್ತಿರುವುದು ಅವರು ದೇಶಕ್ಕೆ ನೀಡಿರುವ ಅಪಾರ ಕೊಡುಗೆಯಿಂದ. ಅದೇ ರೀತಿ ವಿದ್ಯಾರ್ಥಿಗಳು ದೇಶಕ್ಕಾಗಿ ಕೊಡುಗೆ ನೀಡುವಂತಾಗ ಬೇಕು. ಆಗ ನಿಮ್ಮನ್ನು ಸಹ ಸ್ಮರಣೆ ಮಾಡಲಾಗುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ನಕಾರಾತ್ಮಕ ಚಿಂತನೆಗಳಿಂದ ಯಶಸ್ಸು ಸಾಧ್ಯವಿಲ್ಲ ಸ್ವಾಮಿ ವಿವೇಕಾನಂದರಂತೆ ಸದೃಢ ಭಾರತ ನಿರ್ಮಿಸಲು ಯುವ ಪೀಳಿಗೆ ಮುಂದಾಗಬೇಕೆಂದರು.
ಈ ವೇಳೆ ಪ್ರಾಚಾರ್ಯಎಂ.ಹೆಚ್ ಬೇತೂರು ಮಠ, ವಕೀಲರ ಸಂಘದ ಅಧ್ಯಕ್ಷ ಟಿ ಮಂಜುನಾಥ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್ ಅರುಣ್ ಕುಮಾರ್, ಶ್ರೀನಿವಾಸ್ ಮತ್ತಿತರರಿದ್ದರು.

Leave a Comment