ಮಾದಕ ದ್ರವ್ಯ ಸಾಗಾಣೆ ನೈಜೀರಿಯನ್ ಸೆರೆ

ಬೆಂಗಳೂರು,ಆ.೧೭- ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರದ ಬಳಿ ಪೊಲೀಸರು ಬಂಧಿಸಿದ್ದಾರೆ.
ಈತ ನೈಜೀರಿಯಾದವನಾಗಿದ್ದು ಮುಂಬೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಆತನ ಬ್ಯಾಗ್‌ನಲ್ಲಿ ಇದ್ದ ಬಾಟಲಿಯಲ್ಲಿ ಎಲ್‌ಎಸ್‌ಡಿ ಎಂಬ ಮಾದಕ ದ್ರವ್ಯ ಇತ್ತು. ಸುಮಾರು ೪.೧ ಗ್ರಾಂ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ಮುಂಬೈ, ಕೇರಳ, ದೆಹಲಿಯಲ್ಲಿನ ಡ್ರಗ್‌ಮಾಫಿಯಾ ಗ್ಯಾಂಗ್‌ಗಳ ಜತೆ ನಂಟು ಇರುವ ಶಂಕೆಯಿದ್ದು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Leave a Comment