ಮಾದಕ ಚೆಲುವೆ ಸನ್ನಿ ಫುಟ್ಬಾಲ್ ಆಟಕ್ಕೆ ಅಭಿಮಾನಿಗಳು ಫಿದಾ

 

ಮುಂಬೈ, ನ ೨೦- ಬಾಲಿವುಡ್‌ನ ಮಾದಕ ನಟಿ ಸನ್ನಿಲಿಯೋನ್ ಫುಟ್ಬಾಲ್ ಆಡುವ ವಿಡಿಯೋ ಕಂಡು ಅಭಿಮಾನಿಗಳಿಗೆ ಫುಲ್ ಫಿದಾ ಆಗಿದ್ದಾರೆ.

ತನ್ನ ಮಾದಕ ಚೆಲುವಿನಿಂದ ಪಡ್ಡೆ ಹೈಕಳ ನಿದ್ದೆ ಕೆಡಿಸುವ ಮೋಹಕ ಬೆಡಗಿ ಸನ್ನಿಲಿಯೋನ್ ಫುಟ್ಬಾಲ್ ಆಟ ಆಡವ ಮೂಲಕ ಕ್ರೀಡೆಯಲ್ಲೂ ಮುಂದಿದ್ದಾರೆ ಎಂದು ತೋರಿಸಿದ್ದಾರೆ. ಸದಾ ತನ್ನ ಹಾಟ್ ಪೋಟೋ ಹಾಗೂ ಮನಮೋಹಕ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಹಲ್ ಚೆಲ್ ಎಬ್ಬಿಸುತ್ತಿದ್ದ ಸನ್ನಿ ಇದೀಗ ಫುಟ್ಬಾಲ್ ಆಡಿ ಗಮನ ಸೆಳೆದಿದ್ದಾರೆ.

ಹೌದು ಸನ್ನಿ ಲಿಯೋನ್ ನಾನು ಬರೀ ನಟನೆ ಮಾತ್ರವಲ್ಲ ಫುಟ್ಬಾಲ್ ಆಡೋದಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಅಬುದಾಬಿಯಲ್ಲಿ ನಡೆಯುತ್ತಿರೋ ಟಿ೧೦ ಕ್ರಿಕೆಟ್ ಲೀಗ್ ವೇಳೆಯಲ್ಲಿ ಗ್ರೌಂಡಿಗಿಳಿದು ಫುಟ್ಬಾಲ್ ಆಡಿ, ಗೋಲ್ ಮೇಲೆ ಗೋಲ್ ಬಾರಿಸಿ ಸೈ ಎನಿಸಿಕೊಂಡು ಅಭಿಮಾನಿಗಳ ಮನ ಕದ್ದಿದ್ದಾರೆ.

ಜೊತೆಗೆ ತಮ್ಮ ಡೆಲ್ಲಿ ಬುಲ್ಸ್ ತಂಡಕ್ಕೆ ಪ್ರೋತ್ಸಾಹಿಸಿದ್ದಾರೆ. ಫುಟ್ಬಾಲ್ ಆಟದಲ್ಲೂ ಕೌಶಲ್ಯ ಮೆರೆದಿರುವುದಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಲ್ಲಿಯೂ ರೋಚಕತೆ ಸೃಷ್ಟಿಯಾಗಿದೆ. ಡೆಲ್ಲಿ ಬುಲ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ಸನ್ನಿ ಫುಟ್ಬಾಲ್ ಆಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Leave a Comment