ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಗೌರವಿಸಬೇಕು

ಅಳ್ನಾವರ, ಅ 12- ದೇಶದ ಪ್ರತಿ ನಾಗರಿಕರನ್ನು ಬೆಳೆಸಲು ಹಿಂದಿ ಭಾಷೆ ಸಂಪರ್ಕದ ಕೊಂಡಿಯಾಗಿದೆ. ಅನ್ಯ ರಾಜ್ಯದಲ್ಲಿ ನೌಕರಿ ಮಾಡಲು ಹಾಗೂ ಮಾಹಿತಿ ಪಡೆಯಲು ಹಿಂದಿ ಭಾಷೆ ಸಹಕಾರಿಯಾಗಿದೆ, ಈ ಭಾಷೆ ಭಾರತೀಯರನ್ನು ಒಗ್ಗೂಡಿಸವಲ್ಲಿ ಯಶಸ್ವಿಯಾಗಿದೆ’ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾ ಭಟ್ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ “ಹಿಂದಿ ದಿವಸ್” ಕಾರ್ಯಕ್ರಮದಲ್ಲಿ” ಹಿಂದಿ ಓದುವ ವಿದ್ಯಾರ್ಥಿಗಳಿಗಾಗಿ ಉದ್ಯೋಗವಕಾಶಗಳು” ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅನುವಾದ ಕ್ಷೇತ್ರ, ಕೇಂದ್ರ ಸರ್ಕಾರಿ ಕ್ಷೇತ್ರ, ಅಭಿನಯ ಕ್ಷೇತ್ರದಲ್ಲಿ ಅಂತರ ರಾಜ್ಯಗಳ ಜನರನ್ನು ಒಂದುಗೂಡಿಸಲು ಹಾಗೂ ವ್ಯಾಪಾರ ಮಾಡಲು ಹಿಂದಿ ಭಾಷೆ ಸಹಕಾರಿಯಾಗಿದೆ. ನಮ್ಮ ಮಾತ್ರು ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಗೌರವಿಸುವದು ಎಲ್ಲರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರ ಭಾಷೆಯು ದೇಶದ ಎಲ್ಲ ಭಾಷೆಯನ್ನು ತನ್ನೊಡಲಲ್ಲಿ ಸೇರಿಸಿಕೊಂಡು ಆರಂಭದಿಂದಲೂ ರಾಷ್ಟ್ರೀಯ ಭಾಷೆಯಾಗಿ ಬೆಳೆದಿದೆ ಎಂದರು.
ಪ್ರಾಂಶುಪಾಲ ಡಾ. ಸಿ.ಎನ್.ಹೊಂಬಾಳಿ ಮಾತನಾಡಿ, ಹಿಂದಿ ಭಾಷೆ ಸರಳ ಹಾಗೂ ಸುಂದರ ಭಾಷೆಯಾಗಿದೆ. ದೇಶದ ಜನರನ್ನು ಜೊಡಿಸುವ ಸಂಪರ್ಕ ಕೊಂಡಿಯಾಗಿದೆ. ಹಿಂದಿ ಭಾಷಿಕರಲ್ಲಿ ಉದ್ಯೋವಕಾಶಗಳು ಹೇರಳವಾಗಿವೆ ಎಂದರು.
ಶಿರೀನ್ ಹಿರೇಕುಂಬಿ, ಸಿದ್ದೇಶ್ವರ ಕಣಬರ್ಗಿ, ಅಶ್ವಿನಿ ನಿಪ್ಪಾಣಿ, ಭಾರತಿ ಪೈ, ಎ.ಎಂ. ಸುತಾರ ಇದ್ದರು. ಅಶೀಪ್ ಹಂಚಿನಮನಿ ಸ್ವಾಗತಿಸಿದರು.ಡಾ. ಶೀಲಾ ಚೌಗಲೆ ಪರಿಚಯಿಸಿದರು. ಡಾ.  ಕವಿತಾ ಮದೇನಹಳ್ಳಿ ವಂದಿಸಿದರು.
ಹಿಂದಿ ವಿಭಾಗದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಫಲಿತಾಂಶ:  ಕವಿತಾ ವಾಚನ ಉಮೇಶ ಜೋಶಿ (ಪ್ರಥಮ) , ಪೇಪಲಿಸೀಟಾ ಫರೇರಾ (ದ್ವಿತೀಯ ), ಶೀತಲ ಮಡಿವಾಳ (ತೃತೀಯ) ಸ್ಥಾನ .
ಆಶು ಭಾಷಣ ಸ್ಪರ್ಧೆಯಲ್ಲಿ ಸಮೀಯುಲ್ಲಾಖಾನ ಕಿತ್ತೂರ (ಪ್ರಥಮ ), ಸಂಗೀತಾ ಪಾಟೀಲ ( ದ್ವಿತೀಯ ) ,ಶೀತಲ ಮಡಿವಾರ( ತೃತೀಯ) ಸ್ಥಾನ ಪಡೆದರು.
ನಿಬಂಧ ಸ್ಪರ್ಧೆಯಲ್ಲಿ ಸೇಂಟ್ ತೆರೇಸಾ ಕಾಲೇಜಿನ ಸಂಜನಾ ಕುನ್ನೂರಕರ ಹಾಗೂ ನೂತನ ಕುನ್ನೂರಕರ ಪ್ರಥಮ ಹಾಗೂ ದ್ವಿತೀಯ ಸ್ಥಾನ , ಸಂಗೀತಾ ಪಾಟೀಲ ತೃತೀಯ ಸ್ಥಾನ ಹಾಗೂ ರಿಯಾನಾ ನಿಚ್ಚಣಕಿ ಸಮಾಧಾನಕರ ಸ್ಥಾನ ಪಡೆದರು.

Leave a Comment