ಮಾಣಿಕ್ಯಪುರದ (ಮಂಕಿ) ಶ್ರೀ ಶಾಂತಿನಾಥ ಜೈನ ಬಸದಿ

ಉತ್ತರ ಕನ್ನಡ ಜಿಲ್ಲೆಯ ತುಂಬಾ ಜೈನ ಧರ್ಮವು ಯಾವ ರೀತಿ ಪ್ರಚಲಿತದಲ್ಲಿತ್ತು. ಆಗಿನ ಕಾಲದಲ್ಲಿ ರಾಜರ ಆಡಳಿತವು ಯಾವ ರೀತಿ ಜೈನ ಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಿತ್ತು ಎಂಬುದಕ್ಕೆ ಈ ಜಿಲ್ಲೆಯಾಧ್ಯಂತ ಜೀವಂತ ಸಾಕ್ಷಿಯಾಗಿರುವ ಜೈನ ಬಸದಿಗಳು ನಮ್ಮ ಮುಂದೆ ಇತಿಹಾಸದ ಭವ್ಯತೆಗೆ ಸಾಕ್ಷಿಯಾಗಿವೆ.

ಇತಿಹಾಸವು ಗತಕಾಲದ ವಿಷಯಗಳನ್ನು ನೆನಪಿನ ಪುಟದಲ್ಲಿ ಜಾರುವಂತೆ ಮಾಡುತ್ತಿದೆ. ಹಿಂದಿನ ಕಾಲದಲ್ಲಿ ಧರ್ಮದ ಆಚರಣೆ ಇಂದಿನ ಕಾಲದಲ್ಲಿ ನಮ್ಮ ಮುಂದೆ ಇದ್ದ ಭವ್ಯ ಕುರುಹುಗಳು ಗತಕಾಲದ ನೆನಪನ್ನು ಮರುಕಳುಹಿಸುವಂತೆ ಮಾಡುತ್ತದೆ.

ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಬಸದಿಯು 14ನೇ ಶಾಂತಿ ತೀರ್ಥಂಕರ ಜೈನ ದಿಗಂಬರ ಬಸದಿಯು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ – 66ಕ್ಕೆ ಹೊಂದಿಕೊಂಡಿರುವ ಊರು ಮಂಕಿ. ಇದರ ಐತಿಹಾಸಿಕ ಹೆಸರು ಮಾಣಿಕ್ಯಪುರ, ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಮಿಸಿದರೆ ಸಿಗುವ ಊರು ಮಂಕಿ. ಇಲ್ಲಿ ಅರಬ್ಬೀ ಸಮುದ್ರದ ಮೂಲಕ ವ್ಯಾಪಾರ ನಡೆಸುತ್ತಿದ್ದ ಕಾಲವದು.

Leave a Comment