ಮಾಡೆಲ್ ಲೈಂಗಿಕ ಕಿರುಕುಳ ಗಾಯಕ ಮಿಕಾ ಬಂಧನ

ದುಬೈ, ಡಿ.೭- ಬಾಲಿವುಡ್ ಗಾಯಕ ಮಿಕಾ ಸಿಂಗ್ ಮಾಡೆಲ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿ ದುಬೈನಲ್ಲಿ ಅರೆಸ್ಟ್ ಆಗಿದ್ದಾರೆ.

೧೭ ವರ್ಷದ ಬ್ರೇಜಿಲಿಯನ್ ಮಾಡೆಲ್‌ಗೆ ಗಾಯಕ ಮಿಕಾ ಸಿಂಗ್ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರೇಜಿಲಿಯನ್ ಹುಡುಗಿ ಮುರಾಕ್ಕಾಬಾತ್ ಪೊಲೀಸ್ ಠಾಣೆಯಲ್ಲಿ ಅಶ್ಲೀಲ ಫೋಟೋ ಕಳುಹಿಸಿದ್ದ ಮಿಕಾ ವಿರುದ್ಧ ದೂರು ನೀಡಿದ್ದರು. ಹುಡುಗಿಯ ದೂರು ಸ್ವೀಕರಿಸಿದ ಪೊಲೀಸರು ಬೆಳಗ್ಗಿನ ಜಾವ ಸುಮಾರು ೩ ಗಂಟೆಗೆ ಬುರ್ ದುಬೈನಲ್ಲಿ ಗಾಯಕ ಮಿಕಾ ಸಿಂಗ್‌ರನ್ನು ಬಂಧಿಸಿದ್ದಾರೆ.

ಸದ್ಯ ಪೊಲೀಸರು ಈಗ ಮಿಕಾರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮಿಕಾ ದುಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಿಕಾ ಸ್ನೇಹಿತರು ಗಾಯಕನನ್ನು ಜೈಲಿನಿಂದ ಹೊರತರಲು ಪ್ರಯತ್ನ ಪಡುತ್ತಿದ್ದಾರೆ.

೨೦೦೭ರಲ್ಲಿ ರಾಖಿ ಸಾವಂತ್ ಅವರು ಮೀಕಾ ಸಿಂಗ್ ಅವರ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಈ ವೇಳೆ ಮೀಕಾ, ರಾಖಿ ಸಾವಂತ್‌ನನ್ನು ಬಲವಂತವಾಗಿ ಎಳೆದು ಕಿಸ್ ಮಾಡಿದ್ದಾರೆ. ಈ ಕಿಸ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ ರಾಖಿ ಸಾವಂತ್, ಮೀಕಾ ಅವರ ಮೇಲೆ ರೊಚ್ಚಿಗೆದ್ದಿದ್ದರು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟೀಲೆರಿತ್ತು.

Leave a Comment