ಮಾಡುವ ಕೆಲಸದಲ್ಲಿ ಶ್ರದ್ದೆಮುಖ್ಯ

ಜಗಳೂರು.ಆ.6; ಪೆÇಲೀಸ್ ಇಲಾಖೆ ಸಿಬ್ಬಂದಿಗೆ ಧೈರ್ಯ,ಸ್ಥೈರ್ಯ, ವಿಧೇಯತೆಗಳಿದ್ದರೆ ಯಾವುದೇ ಸ್ಥಳದಲ್ಲಾಗಲಿ ಕೆಲಸದಲ್ಲಿ ಯಶಸ್ವಿಯಾಗಬಹುದಾಗಿದೆ ಎಂದು ವೃತ್ತ ನಿರೀಕ್ಷಕರಾದ ಬಿ.ಕೆ.ಲತಾ ಹೇಳಿದರು.
ಪಟ್ಟಣದ ಆರಕ್ಷಕ ಉಪ ನಿರೀಕ್ಷಕರ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ವರ್ಗಾವಣೆಗೊಂಡ 9 ಸಿಬ್ಬಂದಿ ಬೀಳ್ಕೊಡಿಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪೆÇಲೀಸ್ ಇಲಾಖೆಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ವರ್ಗಾವಣೆ ಸರ್ವೆ ಸಾಮಾನ್ಯವಾಗಿದೆ.ಯಾವುದೇ ಸ್ಥಳ, ಠಾಣೆಯಾಗಿರಲಿ ಇಲಾಖೆ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾತನ್ನು ಚಾಚು ತಪ್ಪದೇ ಪಾಲಿಸುವ ಗುಣ ಬೆಳಸಿಕೊಳ್ಳಬೇಕು.ಕರ್ತವ್ಯ ನಿಷ್ಟೆ, ಧೈರ್ಯ,ಕಷ್ಟಪಟ್ಟು ಕೆಲಸಮಾಡುದನ್ನು ಕಲಿತರೆ ಮುಂದೆ ಯಾವುದೆ ಠಾಣೆಯಲ್ಲಾದರೂ ನಿರ್ಭಯವಾಗಿ ಕೆಲಸ ಮಾಡಬಹುದಾಗಿದೆ ಎಂದು ಕಿವಿಮಾತು ತಿಳಿಸಿದರು.
ಪಿಎಸ್‍ಐ ಇಮ್ರಾನ್ ಬೇಗ್ ಮಾತನಾಡಿ ಪೆÇಲೀಸ್ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಎನ್ನುವುದು ಪದೋನ್ನತಿ ಇದ್ದಂತೆ.ಹೊಸ ಸ್ಥಳಗಳಲ್ಲಿ ಹೊಸ ಅವಕಾಶಗಳು,ಅನುಭವ ಲಭಿಸುತ್ತದೆ. ಕೆಲಸ ಉತ್ತಮ ಪಡಿಸಿಕೊಳ್ಳಲು ಸದಾವಕಾಶ ಸಿಕ್ಕಂತಾಗುತ್ತದೆ.ಕೆಲಸ ಮಾಡುವ ಸ್ಥಳದಲ್ಲಿ ಸಿಬ್ಬಂದಿ ಹೆಸರು ಕೆಡಸಿಕೊಳ್ಳದೇ ಉತ್ತಮವಾಗಿ ಕೆಲಸ ಮಾಡಿ ಇಲಾಖೆಗೆ,ಹಿರಿಯ ಅಧಿಕಾರಿಗಳಿಗೆ ಹೆಸರು ತರುವಂತಾಗಬೇಕು ಎಂದರು.
ಜಿಲ್ಲೆಯ ವಿವಿಧ ಠಾಣೆಗಳಿಗೆ ಎಎಸ್‍ಐ ಜಯ್ಯಣ್ಣ,ದಪೇದಾರ್‍ಗಳಾದ ಮಂಜಪ್ಪ,ನಾಗರಾಜ,ಉಮೇಶ್, ಹಾಗೂ ಪೆÇಲೀಸ್ ಪೇದೆಗಳಾದ ಶ್ರೀಧರ,ಚೇತನ್,ಚಂದ್ರಶೇಖರ್, ರಮೇಶ ಅಲಬೂರು,ಮಧುರಾ ಇವರುಗಳನ್ನು ಶಾಲು ಹೊದಿಸಿ,ಫಲಪುಷ್ಪಗಳೊಂದಿಗೆ ಹೃದಯಸ್ಪರ್ಶಿಯಾಗಿ ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎಎಸ್‍ಐ ಆಂಜನೇಯ, ರಾಜಪ್ಪ,ರಮೇಶ್,ನಟರಾಜ್,ಲಿಂಗೇಶ್,ಉಮಾಶಂಕರ್,ಮಂಜುನಾಥ್,ಚೈತ್ರ ಸೇರಿದಂತೆ ಇತರರು ಹಾಜರಿದ್ದರು.

Leave a Comment