ಮಾಜಿ ಸೈನಿಕರ ಸನ್ಮಾನ 26 ರಂದು

ಕಲಬುರಗಿ ಆ 24: ಜೈ ಭಾರತ ಮಾತಾ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 26 ರಂದು ಬೆಳಿಗ್ಗೆ 10.30 ಕ್ಕೆ ನಗರದ ಸರದಾರ ವಲ್ಲಭಬಾಯಿ ಪಟೇಲ ವೃತ್ತದಲ್ಲಿ 52 ಜನ ಮಾಜಿ ಸೈನಿಕರ ಸನ್ಮಾನ ನಡೆಯಲಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಸಂದೇಶ ಪವಾರ ತಿಳಿಸಿದರು.ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ನಿರಗುಡಿ ಮುತ್ತ್ಯಾ ಅವರ 52 ನೆಯ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಪ್ರವಾಹ ಪೀಡಿತ ಜನರಿಗೆ ಸಮಿತಿ ವತಿಯಿಂದ ಆಹಾರ ಧಾನ್ಯ ಕಳಿಸಿಕೊಡಲಾಗುವದು ಎಂದರು.ಸುದ್ದಿಗೋಷ್ಠಿಯಲ್ಲಿಮಾಜಿ ಸೈನಿಕ ಶಿವಪುತ್ರ,ಅನೂಪ್,ಕುಣಾಲ್.ಸುರೇಶ ಉಪಸ್ಥಿತರಿದ್ದರು..

Leave a Comment