ಮಾಜಿ ಸಚಿವ ಕೆಜೆ ಜಾರ್ಜ್ ಇಡಿ ವಿಚಾರಣೆ ಅಂತ್ಯ

ಬೆಂಗಳೂರು.ಜ.೧೬. ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವಶ್ಯಕತೆ ಇದ್ದರೇ ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆಯುವುದಾಗಿ ಹೇಳಿದ್ದಾರೆ. ವಿಚಾರಣೆಗೆ ಕರೆದರೇ ಹಾಜರಾಗುವೆ. ನಮ್ಮ ಕುಟುಂಬಕ್ಕೆ ಯಾವುದೇ ಸಮನ್ಸ್ ನೀಡಿಲ್ಲ ಎಂಬುದಾಗಿ ಇಡಿ ವಿಚಾರಣೆಯಿಂದ ಹೊರ ಬಂದ ನಂತ್ರ ಮಾಜಿ ಸಚಿವ ಕೆಜೆ ಜಾರ್ಜ್ ತಿಳಿಸಿದರು.
ಕಾಂಗ್ರೆಸ್ ನ ಮಾಜಿ ಸಚಿವ ಕೆ ಜೆ ಜಾರ್ಜ್ ಅವರ ಇಡಿ ವಿಚಾರಣೆ ಸತತ ನಾಲ್ಕು ಗಂಟೆ ನಡೆದ ನಂತ್ರ ಅಂತ್ಯವಾಗಿದೆ. ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ರಾಹುಲ್ ಸಿನ್ಹಾ ಅವರು ಸತತವಾಗಿ ನಾಲ್ಕು ಗಂಟೆಗಳ ಕಾಲ ಕೆಜೆ ಜಾರ್ಜ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಸತತ ನಾಲ್ಕು ಗಂಟೆ ನಂತ್ರ, ಇಡಿ ವಿಚಾರಣೆಯಿಂದ ಮಾಜಿ ಸಚಿವ ಕೆಜೆ ಜಾರ್ಜ್ ಹೊರ ಬಂದರು.
ಇಡಿ ವಿಚಾರಣೆಯಿಂದ ಹೊರ ಬಂದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜೆ ಜಾರ್ಜ್, ನಮ್ಮ ಕುಟುಂಬಕ್ಕೆ ಯಾವುದೇ ಸಮನ್ಸ್ ಕೊಟ್ಟಿಲ್ಲ. ಯಾವುದೇ ಆಪಾದನೆ ಬಂದ ತಕ್ಷಣ ತಪ್ಪಿತಸ್ತನಾಗಲ್ಲ. ವಿಚಾರಣೆ ಬಳಿಕ ಮಾಜಿ ಸಚಿವ ಜಾರ್ಜ್ ಪ್ರತಿಕ್ರಿಯೆ ನೀಡಿದರು.
ಇಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಅವಶ್ಯಕತೆ ಇದ್ದರೆ ಕರೀಯುತ್ತಾರೆ ಮತ್ತೆ ಬರುವೆ. ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆ ಕೊಡುವೆ. ಮತ್ತೆ ವಿಚಾರಣೆಗೆ ಕರೆದ್ರೇ ಹಾಜರಾಗುವೆ ಎಂಬುದಾಗಿ ತಿಳಿಸಿದರು.

Leave a Comment