ಮಾಜಿ ವಿಶ್ವಸುಂದರಿ ಸೇನ್‌ಗುಪ್ತಾ ಬೆನ್ನಟ್ಟಿದ ಪ್ರಕರಣ : 7 ಮಂದಿ ಸೆರೆ

ಕೋಲ್ಕತಾ, ಜೂ.19 – ಕೋಲ್ಕತ್ತಾದ ಮಾಜಿ ವಿಶ್ವಸುಂದರಿ ಉಶೋಶಿ ಸೇನ್‌ಗುಪ್ತಾ ಅವರನ್ನು ಕಾರನ್ನು ಬೆನ್ನಟ್ಟಿ, ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತ ಪ್ರವೀಣ್ ತ್ರಿಪಾಠಿ ತಿಳಿಸಿದ್ದಾರೆ.
2010 ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ವಿಜೇತ ಸೆನ್‌ಗುಪ್ತಾ ಅವರು ಸೋಮವಾರ ರಾತ್ರಿ ಕೋಲ್ಕತಾ ಉಬರ್ ಕ್ಯಾಬ್ ನಲ್ಲಿ ಪಂಚತಾರಾ ಹೋಟೆಲ್‌ನಿಂದ ಹಿಂತಿರುಗುತ್ತಿದ್ದಾಗ ಚಾಲಕನ ಮೇಲೆ ಹಲ್ಲೆ ಮಾಡಿ ವಾಹನವವನ್ನು ಜಖಂ ಗೊಳಿಸಲಾಗಿದೆ.

ದೂರುದಾರರಿಗೆ ಕಿರುಕುಳ, ಉಬರ್ ಚಾಲಕನ ಮೇಲೆ ಹಲ್ಲೆ ಮತ್ತು ಟ್ಯಾಕ್ಸಿ ಧ್ವಂಸಗೊಳಿಸಿದ ಆರೋಪದ ಮೇಲೆ ಏಳು ಜನರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದಾಳಿಯ ನಂತರ, ರೂಪದರ್ಶಿ – ನಟಿ ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಪೋಸ್ಟ್ ಮಾಡಿದ್ದು , ಅದು ವೈರಲ್ ಆಗಿದೆ, ನಾನು ಮನೆಗೆ ಕಾರಿನಲ್ಲಿ ವಾಪಸ್ ಆಗುವ ಸಮಯದಲ್ಲಿ ಬೈಕಿನಲ್ಲಿ ಬಂದ ಸುಮಾರು 15 ಯುವಕರು ಕಾರಿನ ಚಾಲಕನ ಮೇಲೆ ಮಾಡಿ ವಾಹನವನ್ನು ಜಖಂ ಗೊಳಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಕೌಲಾಗ್‌ನ ಮನೆಯವರೆಗೂ ಹುಡುಗರು ಹಿಂಬಾಲಿಸಿ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ . ನಾನು ಕಾರಿನಿಂದ ಇಳಿದು ಪೊಲೀಸರತ್ತ ಒಡಿದೆ ಅಲ್ಲೇ ಇದ್ದ ಪೊಲೀಸರ ಸಹಾಯ ಬೇಡಿದೆ ಒಂದು ವೇಳೆ ನೀವು ಬರದೆ ಹೋದರೆ ಹುಡುಗರು ಕಾರಿನ ಚಾಲಕನನ್ನು ಕೊಂದೇ ಬಿಡುತ್ತಾರೆ ಎಂದು ಪರಿಪರಿಯಾಗಿ ಮನವಿ ಮಾಡಿದೆ ಆದರೂ ಯುವಕರು ಪೊಲೀಸರನ್ನು ತಳ್ಳಿಕೊಂಡೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ನಡೆದ ಕತೆಯನ್ನು ಹೇಳಿಕೊಂಡಿದ್ದಾರೆ.
ನಾನು ದೂರು ದಾಖಲಿಸಲು ಠಾಣೆಗೆ ಹೋದರೂ ಅದು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪೊಲೀಸರು ದೂರು ಸ್ವೀಕರಿಸಲೂ ಅಲೆದಾಡಿಸಿದರು ಎಂದೂ ಅವರು ಅಲವತುಕೊಂಡಿದ್ದಾರೆ.

ರಾತ್ರಿಯಿಡಿ ಘಟನೆ ಪೂರ್ಣವಾಗಿ ಬೆಚ್ಚಿಬೀಳಿಸಿದೆ. ಇದು ನಾನು ಮರಳಿ ಬಂದ ಕೋಲ್ಕತಾ ಅಲ್ಲ, ವೃತ್ತಿಜೀವನದಲ್ಲಿ ಪ್ರವರ್ಧಮಾನಕ್ಕೆ ಬಂದ ಕೋಲ್ಕತಾ ಅಲ್ಲ ಎಂಬುದು ಮನವರಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Leave a Comment