ಮಾಕಳಿ ಬೇರು ಸಂಗ್ರಹಿಸುತ್ತಿದ್ದ ಎಂಟು ಜನರ ಬಂಧನ

ಹನೂರು: ಸೆ.22- ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ ಎಂಟು ಜನರನ್ನು ಅರಣ್ಯಾಧಿಕಾರಿಗಳ ತಂಡ ಶನಿವಾರ ಬಂಧಿಸಿದ್ದಾರೆ.
ತಮಿಳುನಾಡಿನ ಬಾಲರಾಜು, ಸೆಲ್ವರಾಜು, ಪೆರಿಯ ಸವರಿ, ಆರೋಗ್ಯಮೇರಿ, ವಿನೋದ, ಸೂಸೈಯಿಮೇರಿ, ಇರುದಯರಾಜ್ ಬಂಧಿತ ಆರೋಪಿಗಳು
ಕೌದಳ್ಳಿ ವನ್ಯಜೀವಿ ವಲಯದ ಬಿಳಿಗುಂಡ್ಲು ಬಳಿ ತಮಿಳುನಾಡು ಮೂಲದ ತಂಡವೊಂದು ಬೀಡು ಬಿಟ್ಟು ಮಾಕಳಿ ಬೇರು ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ 40 ಕೆಜಿಯಷ್ಟು ಮಾಕಳಿ ಬೇರಿ ಹಾಗೂ 12 ಉರುಳು ಅದನ್ನು ತೆರೆಗಯಲು ಬಳಸುತ್ತಿದದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ವಲಯ ಅರಣ್ಯಾಧಿಕಾರಿಗಳಾದ ವಿನಯ್‍ಕುಮಾರ್, ನಿಶ್ಚಿತ್ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಕನಕರಾಜು, ಅರಣ್ಯ ರಕ್ಷಕ ಗಿರೀಶ, ಮಲ್ಲಿಕಾರ್ಜುನ, ಪೂಜಾರ್ ಇದ್ದರು.

Leave a Comment