ಮಾಂಜಾದಾರದಿಂದ ಗಾಯಗೊಂಡಿದ್ದ ಯುವಕ ಸಾವು

ಬೆಳಗಾವಿ,ನ 9- ಗಾಳಿಪಟದ ಮಾಂಜಾ ದಾರಕ್ಕೆ ಕತ್ತು ಸಿಕ್ಕಿಸಿಕೊಂಡು ತೀವ್ರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮಣಿಪುರ ಮೂಲದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ದೀಪಕ ಧೋಕ್ಜೊಮ್ (23) ಎಂಬುವವರೇ ಸಾವನ್ನಪ್ಪಿದ್ದಾರೆ.
ಇವರು ಒಂದು ವಾರದ ಹಿಂದೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಬೆಳಗಾವಿಯಿಂದ ಕಾಕತಿಗೆ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಗಾಳಿಪಟದ ಮಾಂಜಾ ದಾರ ಇವರ ಕತ್ತಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದರು.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತದನಂತರ ದೀಪಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ  ಚಿಕಿತ್ಸೆ ಫಲಿಸದೇ ಇವರು ಸಾವನ್ನಪ್ಪಿದ್ದಾರೆ.

Leave a Comment