ಮಹಿಷ ದಸರಾ ರಾಜ್ಯ ಸರ್ಕಾರವೇ ಆಚರಿಸಲು ಒತ್ತಾಯ

ಮೈಸೂರು. ಆ 6. ಮುಂಬರುವ ಅಕ್ಟೋಬರ್ 7 ರಂದು ನೆಡೆಯಲಿರುವ ಮಹಿಷಾ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸುವಂತೆ ಚಿಂತಕ ಹಾಗೂ ಸಾಹಿತಿ ಫ್ರೊ. ಕೆ.ಎಸ್ ಭಗವಾನ್ ಒತ್ತಾಯಿಸಿದರು.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ ಮೈಸೂರು ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರವೇ ನೆಡೆಸುವಂತೆಯೇ ಮಹಿಷ ದಸರಾವನ್ನು ಈ ಬಾರಿ ರಾಜ್ಯ ಸರ್ಕಾರವೇ ನೆಡೆಸಲು ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ದಸರಾ ಜಂಬೂ ಸವಾರಿಯಂತೆಯೇ ಆನೆಯ ಮೇಲೆ ಮಹಿಷನ ಪ್ರತಿಮೆಯನ್ನು ಇರಿಸಿ ಮೆರವಣಿಗೆಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮಹಿಷ ದಸರಾ ಮೆರವಣಿಗೆಯನ್ನು ಮಹಿಷ ದಸರಾ ಪ್ರತಿಷ್ಠಾನವು ಸಮಿತಿ ತನ್ನ ಸ್ವಂತ ವೆಚ್ಚದಲ್ಲಿ ನೆಡೆಸಿಕೊಂಡು ಬರುತ್ತಿದೆ. ಈ ಪ್ರತಿಷ್ಠಾನಕ್ಕೆ ಸರ್ಕಾರದಿಂದ ಯಾವುದೇ ಅನುದಾನ ದೊರಕುತ್ತಿಲ್ಲ ಹಾಗಾಗಿ ಈ ಬಾರಿ ಮಹಿಷ ದಸರಾ ಮೆರವಣಿಗೆಯನ್ನು ರಾಜ್ಯ ಸರ್ಕಾರವೇ ನೆಡೆಸುವಂತೆ ಆಗ್ರಹಿಸಿದ ಭಗವಾನ್ ಈ ಮೆರವಣಿಗೆಯನ್ನು ನೆಡೆಸುವುದರ ಮೂಲಕ ಪ್ರಾಚೀನ ಪಕ್ಷಾಚರಣೆಯ ದ್ರಾವಿಡ ಸಂಸ್ಕøತಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದರು ಭೌದ್ಧ ಧರ್ಮಗಳ ವಿಚಾರಧಾರೆಗಳನ್ನು ಕುರಿತು ಮಾತನಾಡಿದ್ದಕ್ಕಾಗಿ ವಚನ ಶ್ರೇಷ್ಠ ಬಸವಣ್ಣನವರ ವಚನ ತಿಳುವಳಿಕೆಯನ್ನು ಸಹಿಸದವರು ಇವರಿಬ್ಬರನ್ನೂ ಹತ್ಯೆ ಮಾಡಿದ್ದಾರೆ. ಯುವಕರಾಗಿದ್ದ ಸ್ವಾಮಿ ವಿವೇಕನಂದ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲ. ಅದರಂತೆ ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರು ಎಂಬುದೂ ಶುದ್ಧ ಸುಳ್ಳು, ಕೈಲಾಸ, ಸ್ವರ್ಗ ಎಂಬುವುಗಳು ಇಲ್ಲವೇ ಇಲ್ಲವೆಂದು ಫ್ರೊ. ಭಗವಾನ್ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಸಾಹಿತಿ ಬನ್ನೂರು ಕೆ.ರಾಜು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Comment