ಮಹಿಷಿ ವರದಿ ಮೂಲ ಆಶಯ ಕೈಬಿಟ್ಟಿದ್ದಕ್ಕೆ ಪ್ರತಿಭಟನೆ

ಬೆಂಗಳೂರು, ಜೂ.೧೪-ರಾಜ್ಯ ಸರ್ಕಾರ ಮಹಿಷಿ ವರದಿಯ ಆಶಯವನ್ನೇ ಬುಡಮೇಲು ಮಾಡುವ ಅಧಿಸೂಚನೆ ಹೊರಡಿಸಿದೆ ಎಂದು ಆರೋಪಿಸಿ ನಾಡಿನ ಚಿಂತಕರು , ಕನ್ನಡಪರ ಹೋರಾಟಗಾರರು ಇಂದಿಲ್ಲಿ ಧರಣಿ ನಡೆಸಿದರು.

ನಗರದಲ್ಲಿಂದು ಪುರಭವನದ ಮುಂಭಾಗ ಕರ್ನಾಟಕ ವಿಕಾಸ ರಂಗ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ರಾಜ್ಯ ಸರ್ಕಾರವು ಮಹಿಷಿ ವರದಿಯಲ್ಲಿನ ಮೂಲ ಆಶಯಗಳನ್ನು ಕೈಬಿಟ್ಟು ಬೇಡವಾದ ಅಂಶಗಳನ್ನು ಅಧಿಸೂಚನೆ ಹೊರಡಿಸಿದೆ ಎಂದು ಆರೋಪ ಮಾಡಿದರು.

ಕನಿಷ್ಠ ೧೦ನೇ ತರಗತಿವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಜೊತೆಗೆ ೧೫ ವರ್ಷ ಕಡ್ಡಾಯವಾಗಿ ಕರ್ನಾಟಕದಲ್ಲಿ ಮಾಡಬೇಕು ಎನ್ನುವ ಅಂಶ ಇದೆ. ಆದರೆ ಇದನ್ನು ಬದಲಾಯಿಸಿ ಬೇಡವಾದ ಅಂಶಗಳನ್ನು ಉಲ್ಲೇಖ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಧರಣಿ ನಿರತರು ಹೇಳಿದರು.

ಸಹಾಯಧನ ಪಡೆಯುವ ಖಾಸಗಿ ಉದ್ಯಮಿಗಳಿಗೆ ೧೫ ವರ್ಷವನ್ನು ಉಳಿಸಿಕೊಂಡು, ಸರ್ಕಾರದ ನೆರವು ಪಡೆಯದ ಖಾಸಗಿ ಉದ್ಯಮಗಳು ಕರ್ನಾಟಕದಲ್ಲಿ ಕನಿಷ್ಠ ಹತ್ತು ವರ್ಷಗಳು ವಾಸವಾಗಿರುವವರಿಗೆ ಕೆಳಹಂತದ, ಉದ್ಯೋಗಗಳನ್ನು ಮೀಸಲಿಡಬೇಕೆಂದು ಸೂಚಿಸಿದೆ.

ಕನ್ನಡ ಓದಲು ಬರೆಯಲು ಬರುವವರನ್ನು ಕನ್ನಡಿಗರು ಎಂದು ಸೂಚಿಸಲಾಗಿದೆ. ಆದರೆ, ಮಹಿಷಿ ವರದಿಯಲ್ಲಿದೆ ೧೦ನೇ ತರಗತಿ ಮಟ್ಟದ ಕನ್ನಡ ಜ್ಞಾನ ಎಂಬ ಅಂಶವನ್ನು ಬಿಟ್ಟಿರುವುದು ಮಹಿಷಿ ವರದಿಯನ್ನು ಕಡೆಗಣಿಸಿದಂತಾಗಿದೆ. ಇನ್ನೂ, ಖಾಸಗಿ ಉದ್ಯಮಗಳಿಗೆ ಸಹಕಾರಿಯಾಗಿದ್ದು, ಇದರಿಂದ ಕನ್ನಡಿಗರಿಗೆ ಉದ್ಯೋಗ ಕ್ಷೇತ್ರದಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ, ಹಿರಿಯ ಸಂಶೋಧಕ ಚಿದಾನಂದ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಹಿತಿಗಳಾದ ಜರಗನಹಳ್ಳಿ ಶಿವಶಂಕರ, ರಾಮೇಗೌಡ ಸೇರಿದಂತೆ ಪ್ರಮುಖರು, ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಭೇಟಿ

ಮಹಷಿ ವರದಿ ಅಧಿಸೂಚನೆ ಹಾಗೂ ಮುಖ್ಯ ಅಂಶಗಳನ್ನು ಕೈ ಬಿಟ್ಟ ಹಿನ್ನಲೆ ಶೀಘ್ರವಾಗಿ ಯೇ ಕಸಾಪ ಅಧ್ಯಕ್ಷರ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಭೇಟಿ, ಚರ್ಚೆಸಲಿದೆ ಎಂದು ಮನುಬಳಿಗಾರ್ ಹೇಳಿದರು.

Leave a Comment