ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 2 ವರ್ಷ ಶಿಕ್ಷೆ

 

 

ಕಲಬುರಗಿ ಜು 17: ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಸುರಪುರ  ಪ್ರಥಮ ದರ್ಜೆ ನ್ಯಾಯಾಲಯ ಅಪರಾಧಿಗೆ 2 ವರ್ಷ ಕಠಿಣ ಸಜೆ ಮತ್ತು 11 ಸಾವಿರ ರೂ ದಂಡ ವಿಧಿಸಿದೆ.

ಸುರಪುರ ತಾಲೂಕಿನ ವಾಗಣಗೇರಿಯಲ್ಲಿ ಪದ್ದಮ್ಮ ದೇಸಾಯಿಗೌಡ ಎಂಬ ಮಹಿಳೆಯು ತನ್ನ ಪಾಲಿಗೆ ಬರಬೇಕಾದ 2 ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡಲು ಕೇಳಿದಾಗ ಆರೋಪಿ ರಾಘಪ್ಪ ಹಣಮಂತ್ರಾಯ ಮಾಲಿಪಾಟೀಲ ಎಂಬಾತ ಮಹಿಳೆಗೆ ಬೈಯ್ದು ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಸುರಪುರ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು.

2015 ರ ಮಾರ್ಚ 6  ರಂದು ನಡೆದ ಈ ಘಟನೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಿಗೇರ ಅವರು ವಾದವಿವಾದವನ್ನು  ಆಲಿಸಿ,ಆರೋಪ ರುಜುವಾದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಚಂದ್ರಶೇಖರ ಮಸಳಿ ವಾದ  ಮಂಡಿಸಿದ್ದರು..

ÆA¢UÉ ¹JA ZÀZÉð

Leave a Comment