ಮಹಿಳೆ ಮಾಂಗಲ್ಯ ಸರ ಕಳವು

ಬೆಂಗಳೂರು,ಮೇ.೧೬- ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಯನ್ನು ಪಲ್ಸರ್ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾಂಗಲ್ಯದ ಸರ ಎಗರಿಸಿ ಪರಾರಿಯಾಗಿರುವ ದುರ್ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಡಕಮಾರನಹಳ್ಳಿಯ ಮಾಹದೇವಮ್ಮ(೫೮) ಅವರು ವಿಜಯನಗರಕ್ಕೆ ತೆರಳುವ ಸಲುವಾಗಿ ಮಾದನಾಯಕನಹಳ್ಳಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ವನ್ನು ಕಸಿಸಿದ್ದಾರೆ ಮಹಾದೇವಮ್ಮ ಸರವನ್ನು ಬಲವಾಗಿ ಹಿಡಿದಿದ್ದ ಕಾರಣ ಸರ ತುಂಡಾಗಿ ಅರ್ಧದಷ್ಟು ಭಾಗ ಕಳ್ಳರ ಪಾಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Leave a Comment