ಮಹಿಳೆ ನಾಪತ್ತೆ

ಬೆಂಗಳೂರು, ಸೆ. ೨೨- ತವರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಮಹಿಳೆಯು ನಾಪತ್ತೆಯಾಗಿರುವ ಘಟನೆ ಆರ್‌ಎಂಸಿ ಯಾರ್ಡ್‌ನಲ್ಲಿ ನಡೆದಿದೆ.
ಆರ್‌ಎಂಸಿಯಾರ್ಡ್‌ನ ಸುಧಾ (28) ಎಂಬುವರು ಕಳೆದ ಸೆ. 7 ರಂದು ಚಿಕ್ಕಮಗಳೂರು ಜಿಲ್ಲೆ ಕಡೂರಿಗೆ ಹೋಗುವುದಾಗಿ ಕೆಎಸ್ಸ್‌ಆರ್‌ಟಿಸಿ ಬಸ್‌ನಲ್ಲಿ ಹೋದವರು ನಾಪತ್ತೆಯಾಗಿದ್ದಾರೆ.
ಸುಧಾ ಅವರಿಗೆ ಇಬ್ಬರು ಮಕ್ಕಳಿದ್ದು, ತವರಿಗೆ ಹೋಗುವ ಮುನ್ನ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ತವರಿಗೂ ಹೋಗದೆ ಕಾಣೆಯಾಗಿರುವ ಸುಧಾ ಅವರನ್ನು ಪತ್ತೆ ಮಾಡುವಂತೆ ಪತಿ ರವಿಕುಮಾರ್ ಅವರು ಆರ್‌ಎಂಸಿ ಯಾರ್ಡ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Comment