ಮಹಿಳೆಯ ನಂಬರ್ ಕೇಳಿದ ವ್ಯಕ್ತಿಗೆ ಪೊಲೀಸರ ಪ್ರತಿಕ್ರಿಯೆ

ಪುಣೆ,ಜ.೧೪ಇತ್ತೀಚಿನ ದಿನಗಳಲ್ಲಿ ಭಾರತೀಯ ಪೊಲೀಸ್ ಪಡೆಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ ಹಾಗೂ ವಿನೂತನ ಮಾರ್ಗಗಳಿಂದ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.
ಟೆಕ್‌-ಸೇವಿ ಪೊಲೀಸರು ಕಿಡಿಗೇಡಿಗಳಿಗೆ ತಮ್ಮ ವ್ಯಂಗ್ಯಭರಿತ ಪ್ರತಿಕ್ರಿಯೆಗಳಿಂದಲೇ ಕಟುಕುತ್ತಾ ವಾರ್ನಿಂಗ್ ನೀಡುತ್ತಿದ್ದಾರೆ.
ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್‌ರ ಫೇಮಸ್ ಡೈಲಾಗ್‌ನಿಂದ ಹಿಡಿದು, ಸಾಧ್ಯವಿರುವ ಎಲ್ಲ ಪಂಚಿಂಗ್ ಅಸ್ತ್ರಗಳನ್ನೂ ಬಳಸುತ್ತಿರುವ ಪೊಲೀಸರು, ಯುವ ಸಮುದಾಯದ ಮನಗೆಲ್ಲುತ್ತಿದ್ದಾರೆ.
ಇತ್ತೀಚೆಗೆ ಪುಣೆ ಪೊಲೀಸ್‌ಗೆ ಟ್ವಿಟರ್‌ ಮೂಲಕ ಧಾನೋರಿ ಪ್ರದೇಶದ ಪೊಲೀಸ್ ಸ್ಟೇಷನ್ನಿನ ಫೋನ್ ನಂಬರ್‌ ಕೇಳಿದ ನಿಧಿ ದೋಶಿ ಎಂಬ ಮಹಿಳೆಗೆ ತಕ್ಷಣ ಪ್ರತಿಕ್ರಿಯೆ ಸಿಕ್ಕಿ, ದೂರವಾಣಿ ಸಂಖ್ಯೆ ಸಿಕ್ಕಿದೆ.
ಈ ಟ್ವೀಟ್ ಹಾಗೂ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಚಿಕ್ಲು ಎಂಬ ಪುಂಡನೊಬ್ಬ, ನಾನು ಆಕೆಯ ನಂಬರ್‌ ಪಡೆಯಬಹುದೇ ಎಂದು ಕೇಳಿದ್ದಾನೆ.ಇದಕ್ಕೆ ಪ್ರತಿಕ್ರಿಯಿಸಿದ ಪುಣೆ ಪೊಲೀಸ್‌, “ಸರ್‌ ನಮಗೆ ಸದ್ಯದ ಮಟ್ಟಿಗೆ ನಿಮ್ಮ ನಂಬರ್‌ ಬಗ್ಗೆಯೇ ಹೆಚ್ಚು ಆಸಕ್ತಿ ಇದೆ. ಲೇಡಿಯ ನಂಬರ್‌ ಮೇಲಿನ ನಿಮ್ಮ ಆಸಕ್ತಿಯನ್ನು ತಿಳಿಯುವ ಕುತೂಹಲ ನಮ್ಮದು. ನೀವು ಡಿಎಂ ಮಾಡಬಹುದು.
ನಿಮ್ಮ ಖಾಸಗಿತನವನ್ನು ಗೌರವಿಸುತ್ತೇವೆ,” ಎನ್ನುವ ಮೂಲಕ ಕಿಡಿಗೇಡಿಯ ತೀಟೆ ಇಳಿಸಿದೆ ಪುಣೆ ಪೊಲೀಸ್ ಹ್ಯಾಂಡಲ್.

Leave a Comment