ಮಹಿಳೆಯರ ಸರ ಸುಲಿಗೆ ಕುಖ್ಯಾತ ಕಳ್ಳ ಪೊಲೀಸ್ ಬಲೆಗೆ

ಮಂಗಳೂರು, ಜ.೨೪- ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರಿನ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಬಡಗ ಉಳಿಪಾಡಿ ಮಳಲಿ ಮಟ್ಟಿ ನಿವಾಸಿ ವಿನಯ ಪ್ರಸಾದ್ ಯಾನೆ ವಿನೋದ್ ಜೋಗಿ(೨೭) ಎಂದು ಹೆಸರಿಸಲಾಗಿದೆ. ಈತನ ವಿರುದ್ಧ ದಾಖಲಾಗಿದ್ದ ೧೦ ಪ್ರಕರಣಗಳನ್ನು ಪತ್ತೆ ಮಾಡಿ ವಿವಿಧೆಡೆ ಅಡಮಾನ ಇರಿಸಿದ್ದ ಸುಮಾರು ೩೦೦ ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ವೌಲ್ಯ ೧೨ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಬೈಕ್ ಮತ್ತು ಆಟೋರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣ ಸಹಿತ ಇವೆಲ್ಲವುಗಳ ಒಟ್ಟು ವೌಲ್ಯ ೧೪ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯ ವಿರುದ್ಧ ಕಾವೂರು ಠಾಣೆಯಲ್ಲಿ ಎರಡು, ಪೂರ್ವ (ಕದ್ರಿ), ಬರ್ಕೆ, ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಆರೋಪಿ ಪಾದಚಾರಿ ಮಹಿಳೆಯರನ್ನು ಗುರಿಯಾಗಿರಿಸಿ ಕೃತ್ಯವೆಸಗುತ್ತಿದ್ದ ಎನ್ನಲಾಗಿದೆ.

Leave a Comment