ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 22 ಆಟಗಾರ್ತಿಯರ ಹೆಸರು ಪ್ರಕಟ

ನವದೆಹಲಿ, ಅ 12 – ಎಫ್‍ಐಎಚ್ ಒಲಿಂಪಿಕ್ ಅರ್ಹತಾ ಸುತ್ತಿನ ಟೂರ್ನಿ ಸನಿಹದಲ್ಲಿದ್ದು, ಹಿರಿಯರ ಹಾಕಿ ಮಹಿಳಾ ತಂಡದ ರಾಷ್ಟ್ರೀಯ ಶಿಬಿರಕ್ಕೆ 22 ಸದಸ್ಯೆಯರನ್ನು ಹಾಕಿ ಇಂಡಿಯಾ ಪ್ರಕಟಿಸಲಾಗಿದೆ.

ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಅ. 14 ರಿಂದ ತರಬೇತಿ ಶಿಬಿರ ಆರಂಭವಾಗಲಿದೆ. ನವೆಂಬರ್ 1 ಮತ್ತು 2 ರಂದು ನಡೆಯುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಶಿಬಿರದಲ್ಲಿ ಪೂರ್ವ ತಯಾರಿ ನಡೆಸಲಾಗುವುದು.

ಯುಎಸ್‍ಎ ವಿರುದ್ಧ ಭಾರತ ಎರಡು ಪಂದ್ಯಗಳಾಡಲಿದೆ. ಈ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ತಂಡ ಟೋಕಿಯೊ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯಲಿದೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಐದು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋಲು ಅನುಭವಿಸಿತ್ತು. ಇನ್ನುಳಿದ ಮೂರು ಪಂದ್ಯಗಳು ಡ್ರಾನಲ್ಲಿ ಸಮಾಪ್ತಿಯಾಗಿತ್ತು.

ಭಾರತ ಹಾಕಿ ತಂಡ (22): ಸವಿತಾ, ರಜನಿ ಎಟ್ಟಿಮರ್ಪು, ದೀಪಾ ಗ್ರೇಸ್ ಎಕ್ಕಾ, ರೀನಾ ಖೊಖಾರ್, ಸಲೀಮಾ ಟೆಟೆ, ಗುರುಜೀತ್ ಕೌರ್, ಉದಿತಾ, ನಿಕ್ಕಿ ಪ್ರಧಾನ್, ನಿಶಾ, ಸುಶೀಲ ಚಾನು, ಪುಖ್ರಂಬಮ್, ಮೋನಿಕಾ, ಲಾಲೀಮಾ ಮಿಂಜ್, ನೇಹಾ ಗೋಯಲ್, ನಮೀತಾ ಟೊಪ್ಪೊ, ಸೋನಿಕಾ, ರಾಣಿ ರಾಂಪಾಲ್, ನವನೀತ್ ಕೌರ್, ಲಾಲ್ರೆಸಿಯಾಮಿ, ನವಜೋತ್ ಕೌರ್, ಶರ್ಮಿಲಾ ದೇವಿ, ಜ್ಯೋತಿ ಹಾಗೂ ವಂದನಾ ಕಟಾರಿಯಾ.

Leave a Comment