ಮಹಿಳೆಯರ ಮೂತ್ರ ಸೋಂಕಿಗೆ ಸರಳ ಸಲಹೆ

 

ಮೂತ್ರ ಕೋಶದ ಸೋಂಕಿಗೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನಲ್ಲಿಯೂ ಇದು ಕಾಡುತ್ತದೆ. ಮೂತ್ರವನ್ನು ಹೆಚ್ಚು ಕಾಲ ಕಟ್ಟಿದ್ರೆ ಸೋಂಕಿಗೆ ಕಾರಣವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ತುರಿಕೆ ಸೇರಿದಂತೆ ಕೆಲ ಸಮಸ್ಯೆಗಳು ಕಾಡುತ್ತವೆ. ದಿನ ಕಳೆದಂತೆ ಸಮಸ್ಯೆ ಉಲ್ಬಣಿಸುತ್ತದೆ.

ಮಸಾಲೆ ಪದಾರ್ಥ, ಕರಿದ ತಿಂಡಿಯನ್ನು ಹೆಚ್ಚು ಸೇವನೆ ಮಾಡುವವರಲ್ಲಿ ಮೂತ್ರದ ಸೋಂಕು ಹೆಚ್ಚಾಗಿ ಕಾಡುತ್ತದೆ. ಕೊಳಕು ಶೌಚಾಲಯ ಬಳಸುವುದು ಮೂತ್ರಕೋಶದ ಸೋಂಕಿಗೆ ದಾರಿ ಮಾಡಿಕೊಡುತ್ತದೆ. ಸೆಕ್ಸ್ ನಂತರ ಖಾಸಗಿ ಅಂಗವನ್ನು ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ಮಾಡಿದ್ರೆ ಕೂಡ ಸಮಸ್ಯೆ ಕಾಡುತ್ತದೆ.

ಗೋಮುಖಾಸನ ಯೋಗದ ಮೂಲಕ ಮೂತ್ರದ ಸೋಂಕನ್ನು ಕಡಿಮೆ ಮಾಡಿಕೊಳ್ಳಬಹುದು/ ಮಹಿಳೆಯರು ಸುಲಭವಾಗಿ ಮಾಡಬಹುದಾದ ಯೋಗ ಇದು.ಪ್ರತಿ ದಿನ ಒಂದು ಗ್ಲಾಸ್ ಕ್ರ್ಯಾನ್ಬೆರಿ ರಸವನ್ನು ಕುಡಿಯಬೇಕು. ನಾಲ್ಕೈದು ದಿನ ಕ್ರ್ಯಾನ್ಬೆರಿ ರಸ ಕುಡಿಯುತ್ತಿದ್ದಂತೆ ಅದ್ರ ಪರಿಣಾಮ ನಿಮಗೆ ಗೊತ್ತಾಗುತ್ತದೆ.

ಬೆಚ್ಚಗಿನ ನೀರಿನಲ್ಲಿ ಖಾಸಗಿ ಅಂಗವನ್ನು ಸ್ವಚ್ಚಗೊಳಿಸಬೇಕು.

ಬೆಳ್ಳುಳ್ಳಿ ಬ್ಯಾಕ್ಟಿರಿಯಾ ಹೊಡೆದೋಡಿಸುವ ಶಕ್ತಿ ಹೊಂದಿದೆ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಿದ್ರೆ ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.

ಒಂದು ಲೋಟ ನೀರಿಗೆ ಒಂದು ಚಮಚ ಸೇಬು ವಿನೆಗರ್ ಮಿಕ್ಸ್ ಮಾಡಿ ಸೇವನೆ ಮಾಡಬಹುದು.

ಮಜ್ಜಿಗೆ ಕೂಡ ಮೂತ್ರಕೋಶದ ಸೋಂಕು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಪ್ರತಿ ದಿನ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಬೇಕು.

ಒಂದು ಗ್ಲಾಸ್ ಅಕ್ಕಿ ನೀರಿಗೆ ಸಕ್ಕರೆ ಬೆರೆಸಿ ಕುಡಿದ್ರೆ ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.

Leave a Comment