ಮಹಿಳೆಯರ ಭಾರತ ಎ ತಂಡ ಪ್ರಕಟ-ಕನ್ನಡತಿ ವೇದಾ ಕೃಷ್ಣಮೂರ್ತಿ ನಾಯಕಿ

ಮೆಲ್ಬೋರ್ನ್, ನ ೨೨-ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಮಹಿಳೆಯರ ಟೀಇಂಡಿಯಾದ ಎ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆ ಸಮಿತಿ ಪ್ರಕಟಿಸಿದ್ದು, ತಂಡಕ್ಕೆ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ಡಿ. ೧೨ ರಿಂದ ೨೩ರವರೆಗೆ ಕ್ವೀನ್ಸ್ ಲೆಂಡ್‌ನಲ್ಲಿ ನಡೆಯುವ ಏಕದಿನ ಹಾಗೂ ಟಿ-೨೦ ಸರಣಿಗಳಿಗೆ ಭಾರತ ಎ ತಂಡವನ್ನು ಆಯ್ಕೆಮಾಡಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ವನಿತೆಯರು ಮೂರು ಏಕದಿನ ಪಂದ್ಯಗಳು ಹಾಗೂ ಹಲವು ಟಿ-೨೦ ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಆಫ್ ಸ್ಪಿನ್ನರ್ ಅನುಜಾ ಪಾಟೀಲ್ ಉಪನಾಯಕಿ ಜವಾಬ್ದಾರಿಯ ಹೊಣೆ ನೀಡಲಾಗಿದೆ. ಪ್ರವಾಸಕ್ಕೆ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸುಷ್ಮಾ ವರ್ಮಾ ಹಾಗೂ ನುಝತ್ ಪರ್ವೀನ್ ಅವರು ಪಂದ್ಯದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಭಾರತ ಎ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದ ಬೆನ್ನಲ್ಲೆ ಕ್ರಿಕೆಟ್ ಆಸ್ಟ್ರೇಲಿಯಾ ಇಂದು ತನ್ನ ಎ ತಂಡವನ್ನು ಘೋಷಿಸಿದೆ. ಮಹಿಳಾ ಕ್ರಿಕೆಟ್ ಬೆಳವಣಿಗೆ ಕಾರ್ಯಕ್ರಮದಡಿ ಭಾರತದೊಂದಿಗಿನ ನಾಲ್ಕು ವರ್ಷಗಳ ಒಪ್ಪಂದದ ಒಂದು ಭಾಗ ಇದಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಎ ಪ್ರವಾಸ ಮಾಡಿತ್ತು. ಇದೀಗ ಮೊದಲ ಬಾರಿ ಆತಿಥ್ಯವನ್ನು ವಹಿಸುತ್ತಿದೆ. ಎರಡೂ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಬ್ರಿಸ್ಬೇನ್ ನಲ್ಲಿ ಆಡಲಿದ್ದು, ಮೂರು ಟಿ-೨೦ ಪಂದ್ಯಗಳನ್ನು ಗೋಲ್ಡ್ ಕಾಸ್ಟ್ ನಲ್ಲಿ ಆಡಲಿವೆ.

ಭಾರತ ಎ ತಂಡ: ವೇದಾ ಕೃಷ್ಣಮೂರ್ತಿ (ನಾಯಕಿ), ಅನುಜಾ ಪಾಟೀಲ್ (ಉಪ ನಾಯಕಿ), ಪ್ರಿಯಾ ಪೂನಿಯಾ, ಶಫಾಲಿ ವರ್ಮಾ, ಹರ್ಲೀನ್ ಡಿಯೊಲ್, ದೇವಿಕಾ ವೈದ್ಯ, ಡಿ.ಹೇಮಲತಾ, ತನುಶ್ರೀ ಸರ್ಕಾರ್, ಸುಷ್ಮಾ ವರ್ಮಾ(ವಿ.ಕೀ), ನುಝತ್ ಪರ್ವೀನ್ (ವಿ.ಕೀ), ಮಾನಸಿ ಜೋಷಿ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಮನಾಲಿ ದಾಕ್ಷಿಣಿ, ಟಿ.ಪಿ ಕನ್ವರ್.

ಆಸ್ಟ್ರೇಲಿಯಾ ಎ ತಂಡ:   ಮೈಟ್ಲನ್ ಬ್ರೈನ್, ಹೇದರ್ ಗ್ರಹಾಮ್, ಪೋಬ್ ಲಿಚ್ಪೀಲ್ಡ್, ತಹ್ಲೀಯಾ ಮೆಕ್ಗ್ರಾಥ್ (ನಾಯಕಿ), ಬ್ರಿಜೆಟ್ ಪ್ಯಾಟರ್ ಸನ್, ಜಾರ್ಜಿಯಾ ರೆಡ್ಮೆನ್, ಸಾಮ್ಮಿ ಜೋ ಜಾನ್ಸನ್, ಮೊಲ್ಲಿ ಸ್ಟ್ರಾನೊ, ಅನ್ನಾಬೆಲ್ ಸೌಥರ್ ಲೆಂಡ್, ರಾಚೆಲ್ ಟ್ರೆನಾಮನ್, ಬೆಲಿಂಡಾ ವಕರೆವಾ, ಅಮಂದಾ-ಜೇಡ್ ವೆಲ್ಲಿಂಗ್ಟನ್, ತಹ್ಲೀಯಾ ವಿಲ್ಸಿನ್

Leave a Comment