ಮಹಿಳೆಯರ ಅನಾರೋಗ್ಯಕ್ಕೆ ಕಾರಣಗಳು

ಇಂದಿನ ಮಹಿಳೆಯರು ಕೆಲಸಕ್ಕೆ ಹೋಗಲು ಶುರು ಮಾಡಿದ್ದಾರೆ. ಹಿಂದಿನ ಪೀಳಿಗೆಯ ಮಹಿಳೆಯರಲ್ಲಿ ಹೆಚ್ಚಿನವರು ಗೃಹಿಣಿಯರು. ಆಧುನಿಕ ಮಹಿಳೆಯರು ಕೆಲಸಕ್ಕೆ ಹೋಗುವಾಗ ಸಂಚಾರ, ಮಾಲಿನ್ಯ, ಸೂರ್ಯನ ಬೆಳಕು, ಕಠಿಣ ಹವಾಮಾನ ಪರಿಸ್ಥಿತಿಗಳು, ಗಡುವು, ಕೆಲಸದ ಒತ್ತಡಗಳನ್ನು ನಿಭಾಯಿಸಬೇಕಾಗುತ್ತದೆ. ಇದು ಅವರ ರೋಗನಿರೋಧಕ ಶಕ್ತಿ ಕಡಿಮೆ ಮಾಡಿ, ಅನಾರೋಗ್ಯಕ್ಕೆ ಬೀಳಲು ಕಾರಣವಾಗಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳೆಯರು ಮನೆಯ ಒಳಗೆ ಮತ್ತು ಕಚೇರಿಯ ಹೊರಗೆ ಎರಡೂ ಕಡೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ದುರದೃಷ್ಟವಶಾತ್, ಹೆಚ್ಚಿನ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಮನೆ ಕೆಲಸ ಮಾಡಲು ಸಹಾಯ ಮಾಡುತ್ತಿಲ್ಲ. ಇದರಿಂದ ಇಂದಿನ ಮಹಿಳೆಯರು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಎರಡೂ ಕಡೆ ಬೆವರು ಸುರಿಸಬೇಕಾಗಿದೆ.
ಹೆಚ್ಚು ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚಾದಂತೆ ಮಹಿಳೆಯರಿಗೆ ವ್ಯಾಯಾಮ ಮಾಡಲು ಸಹ ಸಮಯ ಸಿಗುವುದಿಲ್ಲ. ಅಲ್ಲದೆ, ಇಂದಿನ ಉದ್ಯೋಗಗಳು ಒಂದು ರೀತಿಯಲ್ಲಿ ಜಡವಾಗಿರುತ್ತದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಆರೋಗ್ಯವಂತ ಮಹಿಳೆಯೂ ಅನಾರೋಗ್ಯಕ್ಕೆ ತುತ್ತಾಗಲು ಹೆಚ್ಚಿನ ಸಮಯ ಬೇಕಿಲ್ಲ.

ಇಂದಿನ ಮಹಿಳೆಯರಿಗೆ ಅಡುಗೆ ಮಾಡವುದಕ್ಕಾಗಲೀ, ಅದನ್ನು ಸೇವಿಸುವುದಕ್ಕಾಗಲೀ ಸಮಯವಿಲ್ಲ. ಈ ಕಾರಣಕ್ಕಾಗಿ ಅನೇಕ ಮಹಿಳೆಯರು ಜಂಕ್ ಪುಡ್ ಮೇಲೆ ಅವಲಂಬಿತ ರಾಗಿರುತ್ತಾರೆ. ಆದರೆ ರುಚಿ ರುಚಿಯಾಗಿರುವ ಈ ಜಂಕ್ ಫುಡ್ಸ್ ಕೃತಕ ಪದಾರ್ಥಗಳು ಟಾಕ್ಸಿನ್ ಒಳಗೊಂಡಿದ್ದು, ದೇಹದಲ್ಲಿ ಹೆಚ್ಚುವರಿ ಕೊಬ್ಬು ಬೆಳೆಯಲು, ಒಬೆಸಿಟಿಗೆ ಕಾರಣವಾಗಿದೆ. ಕೆಲವು ಸಮೀಕ್ಷೆಗಳು ಆಧುನಿಕ ಮಹಿಳೆಯರಲ್ಲಿ ೬೫% ಮಹಿಳೆಯರು ಮನೆಯ ಆಹಾರಕ್ಕಿಂತ ಹೆಚ್ಚುಜಂಕ್ ಫುಡ್ ಸೇವಿಸುತ್ತಾರೆ ಎಂದು ವರದಿಯಾಗಿದೆ.

ಕೆಲಸಗಳು ಈಗ ಮೊದಲಿನ ಹಾಗಿಲ್ಲ ಎಲ್ಲದಕ್ಕೂ ಗಡುವು ಇರುತ್ತದೆ. ಅದನ್ನು ಹೇಳಿದ ಅವಧಿಗೆ ಮುಗಿಸದಿದ್ದರೆ ಇನ್ನೊಂದು ರೀತಿ ಸಮಸ್ಯೆ ಶುರುವಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು, ಮಹಿಳೆಯರು ಹೆಚ್ಚುವರಿ ಗಂಟೆಗಳ ಕಾಲ ಕೆಲಸಕ್ಕೆ ತೆರಳುತ್ತಾರೆ. ಇದೆಲ್ಲದರ ಜೊತೆಗೆ ಕಚೇರಿ ರಾಜಕೀಯ ಮತ್ತು ಶೋಷಣೆ ಒತ್ತಡದ ಮಟ್ಟವನ್ನು ಹೆಚ್ಚಿಸಿದೆ.
ಬಹಳಷ್ಟು ಜನರಿಗೆ ನಿದ್ರೆಯ ಕೊರತೆಯಿದೆ. ದಶಕಗಳ ಹಿಂದೆ, ಜನರು ರಾತ್ರಿ ೭ ಗಂಟೆಯ ಹೊತ್ತಿಗೆ ಭೋಜನವನ್ನು ಮುಗಿಸಿ, ೯ ಗಂಟೆಗೆ ಮಲಗುತ್ತಿದ್ದರು. ಆದರೆ ಇಂದು, ಮಧ್ಯರಾತ್ರಿ ಯವರೆಗೆ ಜಗತ್ತು ಸಕ್ರಿಯವಾಗಿದೆ. ಆದ್ದರಿಂದ, ನಿದ್ರೆಯ ಕೊರತೆಯು ಪ್ರತಿರಕ್ಷೆಯನ್ನು ಕೊಲ್ಲಲು ಒಂದು ಕಾರಣವಾಗಿದೆ. ಇಂದು ನೈಟ್ ಶಿಫ್ಟ್’ನಲ್ಲೂ ಮಹಿಳೆಯರು ದುಡಿಯುತ್ತಿದ್ದು, ಬೆಳಗಿನ ಸಮಯ ರೆಸ್ಟ್ ಮಾಡಲು ಹೆಚ್ಚು ಅವಕಾಶ ಸಿಗದೆ ನಿದ್ರಾ ಅಭಾವ ಅನುಭವಿಸುತ್ತಿರುವುದಂತು ಸುಳ್ಳಲ್ಲ.

ದಶಕಗಳ ಹಿಂದೆ ಕುಡಿಯುವುದು ಅಥವಾ ಧೂಮಪಾನ ಮಾಡುವುದು ಕೇವಲ ಸಾಂದರ್ಭಿಕ ಸಂದರ್ಭದಲ್ಲಿ ಮಾತ್ರ ರೂಢಿಯಲ್ಲಿತ್ತು. ಆದರೆ ಇಂದು, ಹೆಚ್ಚಿನ ಒತ್ತಡದ ಕಾರಣದಿಂದಾಗಿ ಅನೇಕ ಮಹಿಳೆಯರು ಆರೋಗ್ಯವನ್ನು ನಾಶಮಾಡುವ ಧೂಮಪಾನ, ಮದ್ಯಪಾನ ಚಟಗಳ ಕಡೆಗೆ ಒಲವು ಹೊಂದಿದ್ದಾರೆ. ಆದ್ದರಿಂದ, ಕಾಯಿಲೆಗಳಿಗೆ ಒಳಾಗಾಗುತ್ತಿದ್ದಾರೆ

Leave a Comment