ಮಹಿಳೆಯರು ಮೆಚ್ಚಿದ ಥರ್ಡ್‌ಕ್ಲಾಸ್

ವಿಭಿನ್ನ ಶೀರ್ಷಿಕೆಯನ್ನಿಟ್ಟುಕೊಂಡು ’ಥರ್ಡ್‌ಕ್ಲಾಸ್’ ಸಿನಿಮಾ ನಿರ್ಮಾಣ ಜೊತೆಗೆ ನಾಯಕನಾಗಿ ನಮ್ ಜಗದೀಶ್ ನಟಿಸಿರುವ ಚಿತ್ರಕ್ಕೆ ರಾಜ್ಯಾದ್ಯಂತ ಮಹಿಳೆಯರಿಂದ ಅತ್ಯುತ್ತಮ ಚಿತ್ರ ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ.

ಇದರ ಬೆನ್ನಲ್ಲೇ ಉತ್ತರ ಕರ್ನಾಟಕ,ಬೆಂಗಳೂರು,ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಜನರಿಂದ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ. ಇದು ನಿರ್ಮಾಪಕರೂ ಆಗಿರುವ ನಟ ಜಗದೀಶ್ ಅವರ ಶ್ರಮಕ್ಕೆ ,ಪರಿಶ್ರಮಕ್ಕೆ ಬೆಲೆ ಸಿಕ್ಕ ಖುಷಿಯಲ್ಲಿದ್ದಾರೆ.

ಕಳೆದವಾರ ಬಿಡುಗಡೆಯಾದ ೧೧ ಚಿತ್ರಗಳ ಪೈಕಿ ಲವ್‌ಮಾಕ್‌ಟೈಲ್ ಬಿಟ್ಟರೆ ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಚಿತ್ರಗಳಲ್ಲಿ ’ಥರ್ಡ್‌ಕ್ಲಾಸ್’ ಚಿತ್ರ ಒಂದು ಎನ್ನುವ ಹೆಗ್ಗಳಿಕೆ ಪಡೆದಿದೆ.

ದಿನದಿಂದ ದಿನಕ್ಕೆ ಚಿತ್ರ ರಾಜ್ಯಾದ್ಯಂತ ಜನರ ಮನಸೂರೆಗೊಳ್ಳುತ್ತಿದೆ.ಅದರಲ್ಲಿಯೂ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರ ವೀಕ್ಷಿಸಿದ ಮಹಿಳೆಯರಂತೂ ಹೆಸರು ಥರ್ಡ್‌ಕ್ಲಾಸ್ ಅಂತ ಇದ್ದರೂ ಚಿತ್ರ ಫಸ್ಟ್‌ಕ್ಲಾಸ್, ಜಗದೀಶ್ ಮತ್ತರವರ ತಂಡ ಒಳ್ಳೆಯ ಚಿತ್ರ ಮಾಡಿದೆ. ಈ ರೀತಿಯ ಚಿತ್ರಗಳು ಯಶಸ್ವಿಯಾಗಬೇಕು ಎಂದು ಮನದುಂಬಿ ಹರಸಿ ಹಾರೈಸುತ್ತಿರುವುದು ಜಗದೀಶ್ ಮತ್ತವರ ತಂಡಕ್ಕೆ ಖುಷಿ ಮತ್ತಷ್ಟು ಹೆಚ್ಚಿಸಿದೆ.

೨೫ನೇ ದಿನದತ್ತ
’ಥರ್ಡ್‌ಕ್ಲಾಸ್’ ಚಿತ್ರ ೨೫ನೇ ದಿನದತ್ತ ಮುನ್ನುಗ್ಗುತ್ತಿದೆ. ಜೊತೆಗೆ ದಿನದಿಂದ ದಿನಕ್ಕೆ ಜನರ ಮನ ಗೆಲ್ಲುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಜಗದೀಶ್ ಮತ್ತವರ ತಂಡ ರಾಜ್ಯಾದ್ಯಂತ ಪ್ರಚಾರ ಮಾಡಿತ್ತು.

ಈ ಮಟ್ಟಿಗೆ ಚಿತ್ರದ ಪ್ರಚಾರವನ್ನು ಯಾವುದೇ ಕನ್ನಡದ ಚಿತ್ರ ಮಾಡಿಲ್ಲ ಎನ್ನುವುದು ನಿಸಂಕೋಚವಾಗಿ ಹೇಳಬಹುದು. ಸಿನಿಮಾ ಜೊತೆಗೆ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸುವ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಮರೆದಿದ್ದಾರೆ.

ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಯಾವತ್ತೂ ಸೋಲುವುದಿಲ್ಲ ಎನ್ನುವುದಕ್ಕೆ ಥರ್ಡ್‌ಕ್ಲಾಸ್ ಚಿತ್ರ ತಾಜಾ ಉದಾಹರಣೆ.

೨೫ನೇ ದಿನದತ್ತ

ಥರ್ಡ್‌ಕ್ಲಾಸ್ ಚಿತ್ರ ಇಪ್ಪತ್ತೈದು ದಿನದತ್ತ ಚಿತ್ರ ಮುನ್ನುಗ್ಗುತ್ತಿದ್ದು ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಇದು ಜಗದೀಶ್ ಮುಖದಲ್ಲಿ ಕೊಂಚ ನಿರಾಳ ಭಾವ ಮೂಡಿಸಿದೆ.

Leave a Comment