ಮಹಿಳೆಯರು ಮಾಡಿಸಿಕೊಳ್ಳಬೇಕಾದ 5 ಪರೀಕ್ಷೆಗಳು

ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವೇ ಸಿಗಲ್ಲ. ನಮ್ಮ ದೇಹವನ್ನು ಸಾಕಷ್ಟು ದುಡಿಸಿಕೊಳ್ಳುವ ನಾವು ದೇಹದ ಬಗ್ಗೆ ಕಾಳಜಿ ವಹಿಸಿದರೆ ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ಮುದೊಂದು ದಿನ ಇದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಮಹಿಳೆಯರು ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಆಯಾಯ ಸಮಯದಲ್ಲಿ ಮಾಡಿಕೊಂಡರೆ ತುಂಬಾ ಒಳ್ಳೆಯದು. ಈಗ ೨೦ರ ಹರೆಯದಲ್ಲಿ ಇರುವಂತಹ ಕೆಲವರು ಯಾವ ರೀತಿಯ ಪರೀಕ್ಷೆಗಳನ್ನು s ಮಾಡಿಸಿಕೋಳ್ಳಬೇಕು ಎಂಬುವುದನ್ನ ತಿಳಿಯೋಣ
ರಕ್ತದೊತ್ತಡ
ರಕ್ತದೊತ್ತಡ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಅದರಿಂದ ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ಹೃದಯದ ಸಮಸ್ಯೆ ಮತ್ತು ಕೆಲವೊಂದು ಸಲ ಮೆದುಳಿನ ಆಘಾತ ಉಂಟಾಗಬಹುದು. ಇದರಿಂದ ೨೦ರ ಹರೆಯದ ಬಳಿಕ ಪ್ರತಿ ವರ್ಷವೂ ನೀವು ರಕ್ತದೊತ್ತಡ ಪರೀಕ್ಷೆ ಮಾಡಿಕೊಳ್ಳುತ್ತಾ ಇರಬೇಕು. ಇದು ಸಾಮಾನ್ಯವಾಗಿದ್ದರೆ ಚಿಂತಿಲ್ಲ. ಆದರೆ ಅಸಾಮಾನ್ಯವಾಗಿದ್ದರೆ ಆಗ ನೀವು ಇದನ್ನು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಕೊಳ್ಳುತ್ತಾ ಇರಬೇಕು.
ಕೊಲೆಸ್ಟ್ರಾಲ್
ಅಧಿಕ ಕೊಲೆಸ್ಟ್ರಾಲ್ ಇದ್ದರೆ ಅದು ಹೃದಯದ ಸಮಸ್ಯೆಗೆ ಕಾರಣವಾಗಬಹುದು. ೨೦ ದಾಟಿದ ಬಳಿಕ ಕೊಲೆಸ್ಟ್ರಾಲ್ ನ ಮೊದಲ ಪರೀಕ್ಷೆ ಮಾಡಿಸಿಕೊಳ್ಳಿ. ಕೆಟ್ಟ ಕೊಲೆಸ್ಟ್ರಾಲ್ ೧೩೦ಕ್ಕಿಂತ ಹೆಚ್ಚಿಗೆ ಇದ್ದರೆ ಆಗ ನೀವು ಪ್ರತೀ ವರ್ಷ ಇದನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಸಾಮಾನ್ಯವಾಗಿದ್ದರೆ ಆಗ ನೀವು ಇದನ್ನು ಮೂರು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿದರೆ ತುಂಬಾ ಒಳ್ಳೆಯದು.

ಲೈಂಗಿಕ ರೋಗಗಳ ಪರೀಕ್ಷೆ (ಎಸ್ ಟಿಡಿ)

ಒಬ್ಬರಿಗಿಂತ ಹೆಚ್ಚಿನ ಸಂಗಾತಿ ಜತೆಗೆ ನೀವು ಸಂಪರ್ಕ ಹೊಂದಿದ್ದರೆ ಅಥವಾ ಹೊಸ ಸಂಗಾತಿ ಜತೆಗೆ ಸಂಬಂಧ ಬೆಳೆಸಿದ್ದರೆ ಆಗ ನೀವು ವಾರ್ಷಿಕವಾಗಿ ಕ್ಲಮೈಡಿಯ ಮತ್ತು ಗೊನೊರಿಯಾ ಪರೀಕ್ಷೆ(ಶ್ರೋಣಿಯ ಉರಿಯೂತದ ಕಾಯಿಲೆ) ಮಾಡಿಸಿಕೊಳ್ಳಿ. ಇದು ತುಂಬಾ ಸುಲಭ ಮತ್ತು ಬೇಗನೆ ಆಗುವ ಪರೀಕ್ಷೆಯಾಗಿದೆ.

ವೈದ್ಯಕೀಯ ಸ್ತನ ಪರೀಕ್ಷೆ

೨೦ರ ಹರೆಯದಲ್ಲಿರುವ ಯುವತಿಯರು ಮೂರು ವರ್ಷಕ್ಕೊಮ್ಮೆ ವೈದ್ಯಕೀಯವಾಗಿ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅಮೆರಿಕಾದ ಕ್ಯಾನ್ಸರ್ ಸೊಸೈಟಿಯು ಹೇಳುತ್ತದೆ. ಇದು ಸ್ತನ ಕ್ಯಾನ್ಸರ್ ನ ಪ್ರಮಾಣ ಕಡಿಮೆ ಮಾಡುವುದಿಲ್ಲವಾದರೂ ಬೇಗನೆ ಪತ್ತೆ ಮಾಡಿಕೊಂಡರೆ ಆಗ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಬಹುದಾಗಿದೆ.

ಪ್ಯಾಪ್ ಸ್ಮೀಯರ್

ಪ್ಯಾಪ್ ಸ್ಮೀಯರ್ ಪರೀಕ್ಷೆಯು ಅಸಾಮಾನ್ಯ ಅಂಗಾಂಶಗಳು, ಉರಿಯೂತ ಮತ್ತು ಗರ್ಭ ಕಂಠದಲ್ಲಿನ ಸೋಂಕನ್ನು ಕಂಡು ಹಿಡಿಯುವುದು. ಗರ್ಭಕಂಠದಲ್ಲಿನ ಸೋಂಕು ಮುಂದೆ ಗರ್ಭಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು. ೨೧ರ ಹರೆಯ ದಾಟಿದ ಬಳಿಕ ಮಹಿಳೆಯರು ಪ್ರತೀ ವರ್ಷವು ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡಿಸಿಕೊಳ್ಳಬೇಕು
೨೧ರ ಹರೆಯಕ್ಕಿಂತ ಕಡಿಮೆ ವಯಸ್ಸಿನ ಯುವತಿಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಅಪಾಯವು ಶೇಕಡಾ ಒಂದರಷ್ಟು ಕಡಿಮೆ ಎಂದು ಅಧ್ಯಯನವು ತಿಳಿಸಿದೆ.
ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿರುವ ಮೂಲಕ ವಿಶ್ವದ ಉನ್ನತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.. ಏಕೆಂದರೆ ಮಹಿಳೆಯರು ಆರ್ಥಿಕತೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ. ಇಂದಿನ ಮಹಿಳೆಯರು ಹೆಚ್ಚು ವಿದ್ಯಾವಂತರು.

ಅವರು ಸಹ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ನೀವು ಗಮನಿಸಿದ್ದೀರಾ? ಅವರಲ್ಲಿ ಹೆಚ್ಚಿನವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಹಿಂದಿನ ಪೀಳಿಗೆಯ ಮಹಿಳೆಯರು ಆರೋಗ್ಯವಂತರು ಮತ್ತು ಬುದ್ಧಿವಂತರು ಎಂದು ಅನೇಕ ಸಮೀಕ್ಷೆಗಳು ಸೂಚಿಸುತ್ತಿವೆ. ಜೀವನದ ಗುಣಮಟ್ಟ ಹೆಚ್ಚುತ್ತಿರುವಾಗ ಇಂದಿನವರ ಆರೋಗ್ಯ ಏಕೆ ಕುಸಿಯುತ್ತಿದೆ ಅದಕ್ಕೆ ಕಾರಣ ಹಲವು.

Leave a Comment