ಮಹಿಳೆಯರಿಂದ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ

ಮುಂಡಗೋಡ,ಅ10-ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ 9 ದಿನಗಳ ಕಾಲ ದೈವಜ್ಞ ಸಮಾಜದ ಜ್ಞಾನೇಶ್ವರಿ ಮಹಿಳಾ ಮಂಡಳದ ವತಿಯಿಂದ ಲಲಿತ ಸಹಸ್ರನಾಮ ಪಠಣ ಹಾಗೂ ಅರಿಶಿಣ ಕುಂಕುಮ ಕಾರ್ಯಕ್ರಮ ನಡೆಯಿತು.

9 ದಿನಗಳ ಕಾಲ ನಿತ್ಯ ಸಂಜೆ ನೂರಾರು ಸಂಖ್ಯೆ ಮಹಿಳೆಯರಿಂದ ಸುಮಾರು 2 ಘಂಟೆಗಳ ಕಾಲ ನಡೆಯುತ್ತಿದ್ದ ಲಲಿತ ಸಹಸ್ರನಾಮ ಪಠಣ ಹಾಗೂ ಅರಿಶಿಣ ಕುಂಕುಮ ಕಾರ್ಯಕ್ರಮ ವಿಜಯ ದಶಮಿ ಕೊನೆಯ ದಿನವಾದ ಮಂಗಳವಾರ ಸಂಜೆ ಸಂಪನ್ನಗೊಳಿಸಲಾಯಿತು

Leave a Comment