ಮಹಿಳೆಯರಿಂದ ದೇವಿಯ ಪುರಾಣ ಉದ್ಘಾಟನೆ

ರಾಯಚೂರು.ಅ.11- ಇತ್ತೀಚಿನ ದಿನಗಳಲ್ಲಿ ಪುರಾಣ ಪ್ರವಚನ ಆಲಿಸುವುದನ್ನು ಬಿಟ್ಟು ಕೇವಲ ದಾರವಾಹಿ ವೀಕ್ಷಣೆಯಿಂದ ದೇಶದ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವುದರತ್ತ ಪ್ರತಿಯೊಬ್ಬರು ಗಮನ ಹರಿಸಬೇಕಾಗಿದೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.
ಅವರು ಸ್ಥಳೀಯ ಕಿಲ್ಲೆ ಬೃಹನ್ಮಠದಲ್ಲಿ ನವರಾತ್ರಿ ನಿಮಿತ್ಯ 80ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಉದ್ಘಾಟಿಸಿ ಮಾತನಾಡಿದ ಅವರು, ಶರನ್ನವರಾತ್ರಿ ಆಚರಣೆಯಿಂದ ದೇವಿಯನ್ನು ಆರಾಧಿಸಿದರೇ, ಹೆಣ್ಣು ಮಕ್ಕಳಿಗೆ ಒಳಿತಾಗುತ್ತದೆ. ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ, ಜನರು ಪರದಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಬಾರದೇ, ಬರಗಾಲ ಆವರಿಸಿರುವುದರಿಂದ ಮಠಗಳು ಪುರಾಣ ಪ್ರವಚನ ಆಯೋಜಿಸಿ ಜನರು ನೆಮ್ಮದಿಯ ಬದುಕು ರೂಪಿಸಿಕೊಳ್ಳುವ ಅವಕಾಶ ಕಲ್ಪಿಸಿದೆಂದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿರ್ಮಲಾ ಬೆಣ್ಣೆ, ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಿಯಾಂಕ, ಜಿ.ಪಂ. ಮಾಜಿ ಸದಸ್ಯೆ ಶರಣಮ್ಮ ಕಾಮರೆಡ್ಡಿ, ಡಾ.ಸಗರದ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಡಾ.ಶೀಲಾ, ಲಕ್ಷ್ಮೀ, ರೇಖಾ, ಗಿರೀಜಾ, ರೇಣುಕಾ, ಸ್ವಾಮಿ, ನಾಗಯ್ಯ, ಕೇಶವಮೂರ್ತಿ, ವೀರೇಶ ಉಪಸ್ಥಿತರಿದ್ದರು.

Leave a Comment