ಮಹಿಳೆಯರಲ್ಲಿ ಸಿಸ್ಟೋಸ್ಕೋಪಿ ಚಿಕಿತ್ಸೆ

 

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡುತ್ತದೆ. ಮೂತ್ರ ವಿಸರ್ಜನಾ ನಾಳವು ಚರ್ಮಕ್ಕೆ ಹೊಂದಿಕೊಂಡಿರುವ ಕಾರಣದಿಂದ ಹಾಗೂ ಆ ನಾಳವು ಕೇವಲ ನಾಲ್ಕು ಸೆಂ.ಮೀ ಉದ್ದವಿರುವುದರಿಂದ ರೋಗಾಣುಗಳು ಬಹುಬೇಗ ಮೂತ್ರಕೋಶವನ್ನು ತಲುಪುತ್ತವೆ. ಈ ಕಾರಣದಿಂದ ಮೂತ್ರಕೋಶ ರೋಗಗ್ರಸ್ಥವಾಗಲು ಕಾರಣವಾಗುತ್ತದೆ.

ಸ್ತ್ರೀಯರ ಯೋನಿದ್ವಾರ ಹಾಗೂ ಗುದದ್ವಾರಗಳು ಅತ್ಯಂತ ಸಮೀಪದಲ್ಲಿರುವುದರಿಂದ ಇವೆರೆಡು ದ್ವಾರಗಳಲ್ಲಿ ಇರಬಹುದಾದ ರೋಗಾಣುಗಳು ದೇಹದ ಒಳಭಾಗವನ್ನು ಪ್ರವೇಶಿಸಿ ಅನೇಕ ತೆರನಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪೂರ್ವಪರೀಕ್ಷೆ
ಮೂತ್ರಕೋಶದ ಸಮಸ್ಯೆಗೆ ಸಂಭಂದಪಟ್ಟಂತೆ ಯಾವುದೇ ಮಹಿಳೆ ವೈದ್ಯರ ಬಳಿ ಬಂದಾಗ ಮೊದಲು ಆಕೆ ಹೇಳುವ ರೋಗದ ಲಕ್ಷಣಗಳನ್ನು ಆಲಿಸುತ್ತಾರೆ.
ಆ ಮಹಿಳೆ ಹೇಳುವ ಲಕ್ಷಣಗಳನ್ನು ಆದರಿಸಿ ಔಷದಿ-ಮಾತ್ರೆಗಳ ಮುಖಾಂತರ ಆ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಶೀಲರಾಗುತ್ತಾರೆ.
ಮೂತ್ರದಲ್ಲಿ ಸೋಂಕು ಇರುವುದು ಖಚಿತವಾದಲ್ಲಿ ಔಷದಿ ಮಾತ್ರೆಗಳ ಮುಖಾಂತರತವೂ ಆ ಸಮಸೆ ನಿವಾರಣೆಯಾಗದೇ ಇದ್ದಲ್ಲಿ ಕೊನೆಗೆ ವೈದ್ಯರು ಮೂತ್ರಕೋಶದ ಒಳಭಾಗವನ್ನು ವೀಕ್ಷಿಸುವ ವಿಧಾನಕ್ಕೆ ಮೊರೆಹೋಗುತ್ತಾರೆ.

ಸಿಸ್ಟೋಸ್ಕೋಪಿ ಪರೀಕ್ಷೆ
ಗರ್ಭಕೊಶದ ಒಳಭಾಗವನ್ನು ಪರೀಕ್ಷಿಸಲು “ಹಿಸ್ಟ್ರೋಸ್ಕೋಪಿ” ಉಪರಣ ಬಳಕೆ ಮಾಡುವಂತೆ, ಮಹಿಳೆಯರ ಮೂತ್ರಕೋಶದ ಪರೀಕ್ಷೆ ಮಾಡಲು “ಸಿಸ್ಟೋಸ್ಕೋಪಿ” ಎಂಬ ಉಪಕರಣವನ್ನು ಬಳಸಲಾಗುತ್ತದೆ.
ಇದು ಮೂತ್ರಕೋಶದ ಕೂಲಂಕುಷ ಪರೀಕ್ಷೆಗೆ ನೆರವಾಗುತ್ತದೆ. ಎಲ್ಲಿ ಯಾವ ಸಮಸ್ಯೆ ಇದೆ, ಅದನ್ನು ಹೇಗೆ ಪರಿಹರಿಸಬೇಕೆಂದು ಕಂಡುಕೊಳ್ಳಲು ಇದು ವೈದ್ಯರಿಗೆ ನೆರವಾಗುತ್ತದೆ.
ಪರೀಕ್ಷೆಯ ಮೊದಲ ಹಂತದಲ್ಲಿ “ಯುರೇಥ್ರಾ” ಅಂದರೆ ’ಮೂತ್ರನಾಳ’ ದಲ್ಲಿ ಏನಾದರೂ ಸಮಸ್ಯೆಇದೆಯೇ ಎನ್ನುವುದನ್ನು ತಿಳಿದುಕೊಳ್ಳಲಾಗುತ್ತದೆ.
ಈ ಪರೀಕ್ಷೆಯ ಎರಡನೇ ಹಂತವೆಂದರೆ ಮೂತ್ರನಾಳದ ಮುಖಾಂತರ ಇನ್ನೂ ಆಂತರಿಕ ಭಾಗದಲ್ಲಿ ತಲುಪಿ ಅಲ್ಲಿ ಯಾವುದಾದರೂ ಸಮಸ್ಯೆಇದೆಯೇ ಎಂದು ಕಂಡುಕೊಳ್ಳಬಹುದಾಗಿದೆ.

ಏನೇನು ಸಮಸ್ಯೆಗಳು ಗೋಚರಿಸಬಹುದು? ಮತ್ತು ಅದಕ್ಕೆ ಚಿಕಿತ್ಸೆ.
ಮೇಲಿಂದ ಮೇಲೆ ಮೂತ್ರಸೋಂಕು ಉಂಟಾಗುತ್ತಿದ್ದರೆ ಆ ಸಮಸ್ಯೆಗೆ ಮೂಲ ಕಾರಣ ಏನೆಂದು ತಿಳಿದುಕೊಳ್ಳಲು ( ಸಿಸ್ಟೋಸ್ಕೋಪಿಯಿಂದ) ಸಾಧ್ಯವಾಗುತ್ತದೆ.
ಕೆಲವರಿಗೆ ಮೂತ್ರಸೋಂಕು ಇರುವುದಿಲ್ಲ. ಆದರೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿರುತ್ತದೆ. ಮತ್ತೆ ಮತ್ತೆ ಮೂತ್ರಕ್ಕೆ ಹೋಗಬೇಕೆನಿಸುತ್ತದೆ. ಈ ಸಮಸ್ಯೆಗೆ ಏನು ಕಾರಣ ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ಕೆಲವರಲ್ಲಿ ಮೂತ್ರಕೋಶದ ಪರೀಕ್ಷೆಯಲ್ಲಿ ಮೂತ್ರದ ಜೊತೆಗೆ ರಕ್ತ ಕೂಡ ಕಾಣಿಸಿಕೊಳ್ಳಬಹುದು. ಅಲ್ಲಿ ಒಮ್ಮೊಮ್ಮೆ ಕ್ಯಾನ್ಸರ್‌ನ ಲಕ್ಷಣಗಳು ಕೂಡ ಕಂಡುಬರುತ್ತವೆ. ಅದರ ಮೂಲಕ ಬಯೋಪ್ಸಿಯನ್ನು ಮಾಡಬಹುದು.
ಮೂತ್ರಕೋಶದಲ್ಲಿ ಒಮ್ಮೊಮ್ಮೆ ಚಿಕ್ಕಚಿಕ್ಕ ಹರಳುಗಳಿರುವುದು (ಸ್ಟೋನ್ಸ್) ಸಿಸ್ಟೋಸ್ಕೋಪ್‌ನಿಂದ ಪತ್ತೆಯಾಗುತ್ತವೆ. ಮತ್ತು ಅದೇ ಸಮಯದಲ್ಲಿ ಕಲ್ಲುಗಳನ್ನು ತೆಗೆಯಬಹುದು.
ಯೋನಿ ಹಾಗೂ ಮೂತ್ರಕೋಶದ ನಡುವೆ ಸಂಪರ್ಕ ಏರ್ಪಟ್ಟು ಅಲ್ಲಿ ಪಿಸ್ತೂಲಾ ಬೆಳೆದಿರುವುದು ಸಿಸ್ಟೋಸ್ಕೋಪ್‌ನಿಂದ ಗೊತ್ತಾಗುತ್ತದೆ. ಅದರ ನಿಖರ ಸ್ಥಳ ಕಂಡುಹಿಡಿದು ಚಿಕಿತ್ಸೆ ಮಾಡಲು ಸಹಾಯವಾಗುತ್ತದೆ.
ಮೂತ್ರಕೋಶದಲ್ಲಿ ಎಲ್ಲಿಯಾದರೂ ಪಾಲೀಪ್ (ದುರ್ಮಾಂಸದಂತಹದು) ಏನಾದರೂ ಇದೆಯೆ ಎಂದು ತಿಳಿಯಬಹುದು.
ಇಂಟರ್ ಸಿಸ್ಟೈಸಿಸ್ ಏನಾದರೂ ಕಂಡುಬಂದರೆ ಸಿಸ್ಟೋಸ್ಕೋಪ್ ಮುಕಾಂತರ ಬೋಟಾಕ್ಸ್ ಚುಚ್ಚುಮದ್ದು ಕೊಡಲು ಸಾಧ್ಯವಾಗುತ್ತದೆ.
ಗರ್ಭಕೋಶದ ಕಂಟದಲ್ಲಿ ಸರ್ವೈಕಲ್ ಕ್ಯಾನ್ಸರ್ ಆಗಿದ್ದರೆ ಅದು ಮೂತ್ರಕೋಶದಲ್ಲಿ ಹರಡಿರಬಹುದೇ ಎಂಬುದನ್ನು ಸಿಸ್ಟೋಸ್ಕೋಪ್‌ನಿಂದ ಪತ್ತೆ ಹಚ್ಚಬಹುದು.

ಮೂತ್ರಕೋಶದಲ್ಲಿ ಸಣ್ಣಸಣ್ಣ ಹರಳುಗಳಿದ್ದರೆ, ಪಾಲೀಪ್ ನಂತವು ಇದ್ದರೆ ಸಿಸ್ಟೋಸ್ಕೋಪಿ ಮಾಡುವ ಸಂಧರ್ಭದಲ್ಲಿಯೇ ಅದನ್ನು ಅಲ್ಲಿಯೇ ನಿವಾರಣೆ ಮಾಡಲಾಗುತ್ತದೆ.
ಗರ್ಭಕೋಶ ಕಂಟದಲ್ಲಿ ಸರ್ವೈಕಲ್ ಕ್ಯಾನ್ಸರ್ ಮೂತ್ರಕೋಶಕ್ಕೂ ಹರಡಿದ್ದರೆ, ಅದು ಯಾವ ಹಂತದಲ್ಲಿದೆ (೩ನೇ ಅಥವಾ ೪ನೇ ಹಂತ) ಎಂದು ಮುಂದಿನ ಚಿಕಿತ್ಸೆಗೆ ಶಿಪಾರಸ್ಸು ಮಾಡಲಾಗುತ್ತದೆ.
ಯುರೆಟೆರಿಕ್ Sಣeಟಿಣiಟಿg sssssssಮಾಡಲು ಸಿಸ್ಟೋಸ್ಕೋಪಿ ತುಂಬಾ ಸಹಾಯಕ.
ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಯ ನಂತರ ಸಿಸ್ಟೋಸ್ಕೋಪಿ ತುಂಬಾ ಪ್ರಯೋಜನಕಾರಿ.
– ಡಾ.ಬಿ.ರಮೇಶ್
– ಆಲ್ಟಿಯಸ್ ಹಾಸ್ಪಿಟಲ್:
– #೯೧೫, ೧ನೇ ಮಹಡಿ, ಧನುಷ್ ಪ್ಲಾಜಾ,
– ಐಡಿಯಲ್ ಹೋಮ್ಸ್ ಟೌನ್‌ಶಿಪ್,
– ಗೋಪಾಲನ್ ಮಾಲ್ ಸಮೀಪ,
– ರಾಜರಾಜೇಶ್ವರಿನಗರ, ಬೆಂಗಳೂರು. ೯೬೬೩೩೧೧೧೨೮
– ಶಾಖೆ :ರಾಜಾಜಿನಗರ ೯೯೦೦೦೩೧೮೪೨

 

Leave a Comment