ಮಹಿಳೆಯರಲ್ಲಿ ಮೂತ್ರ ಉರಿ ಕಾಯಿಲೆ

ಇಂಟರ್ ಸ್ಟಿಶಿಯಲ್ ಸಿಸ್ಟ್ಟಿಸ್
ದೇಹದ ಕಲ್ಮಶಗಳನ್ನು ಹೊರಹಾಕುವುದರ ಮೂಲಕ ಮೂತ್ರಜನಕಾಂಗ ನಮ್ಮಜೀವನವನ್ನು ಸುವ್ಯವಸ್ಥಿತವಾಗಿಡಲು ನೆರವಾಗುತ್ತದೆ. ಮೂತ್ರಜನಕಾಂಗ ಸಮರ್ಪಕವಾಗಿ ಕಾರ್ಯ ನಿರ್ವಹಿಸ ಬೇಕೆಂದರೆ ನಮ್ಮ ಜೀವನಶೈಲಿಯೂ ಅಷ್ಟೇ ಚೆನ್ನಾಗಿರಬೇಕು. ಇದರ ಹೊರತಾಗಿಯೂ ನಮ್ಮ ದೇಹದಲ್ಲಿನ ಕೆಲವು ಏರುಪೇರುಗಳಿಂದಾಗ ಮೂತ್ರಕೋಶದ ಹಲವು ತೊಂದರೆಗಳು ಉದ್ಭವಿಸುತ್ತದೆ. ಅದರಿಂದಾಗಿ ಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಕೆಲಸ-ಕಾರ್ಯಗಳು ಸ್ಥಗಿತಗೊಳ್ಳುತ್ತದೆ.
ಮೂತ್ರಕೋಶದ ಸಮಸ್ಯೆ ಮಹಿಳೆಯರು ಹಾಗೂ ಪುರುಷರು ಇಬ್ಬರಲ್ಲಿಯೂ ಕಾಣಿಸಕೊಳ್ಳಬಹುದು. ಆದರೆ ಮಹಿಳೆಯರಲ್ಲಿ ಇದರ ಪ್ರಮಾಣ ಹೆಚ್ಚು.

ಸಂಕೋಚದ ಸ್ವಭಾವದಿಂದಾಗಿ ಬಹಳಷ್ಟು ಮಹಿಳೆಯರು ತಮ್ಮ ಮೂತ್ರಕೋಶದ ಸಮಸ್ಯೆಯ ಬಗ್ಗೆ ಯಾರ ಮುಂದೆಯೂ ಹೇಳಿಕೊಳ್ಳದೆ ನೋವನ್ನು ಹಾಗೆ ಸಹಿಸಿಕೊಳ್ಳುತ್ತಾರೆ. ಬಹುತೇಕವಾಗಿ ಈ ಕಾರಣದಿಂದಲೇ ಅವರಲ್ಲಿ ಈ ಸಮಸ್ಯೆ ಉಗ್ರರೂಪ ಪಡೆದುಕೊಳ್ಳುತ್ತದೆ.
ಮೂತ್ರ ಉರಿಯ ಸಮಸ್ಯೆ :
ಇದು ಮಹಿಳೆಯರಲ್ಲಿ ಕಂಡು ಬರುವ ಗಂಭೀರ ತೊಂದರೆ. ಇದರ ಮುಖ್ಯ ಲಕ್ಷಣವೆಂದರೆ:-
ಮೂತ್ರ ಮಾಡುವಾಗ ತೀವ್ರ ಉರಿಯ ಅನುಭವ
ತಕ್ಷಣವೇ ಹೋಗಬೇಕೆನ್ನುವ ಆತುರ.
ಮೂತ್ರ ಆಗದೇ ಇದ್ದರೂ ಹೋಗಬೇಕೆಂಬ ಧಾವಂತ
ಮೂತ್ರ ಮಾಡಿದ ಬಳಿಕವೂ ತೀವ್ರ ನೋವು

ಮಹಿಳೆಯೊಬ್ಬಳು ಮೂತ್ರಉರಿಯ ಸಮಸ್ಯೆ ಹೊತ್ತಿಕೊಂಡು ವೈದ್ಯರ ಬಳಿಗೆ ಬಂದಾಗ ಅವರು ಆಕೆಯಿಂದ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಹಳಷ್ಟು ಮಹಿಳೆಯರ ಕೇಸ್ ಹಿಸ್ಟ್ರೀ ನೋಡಿದಾಗ ಅವರ ಸಮಸ್ಯೆ ಇತ್ತೀಚಿನದಲ್ಲಾ , ಅನೇಕ ವರ್ಷದಿಂದ ಇರುವುದು ತಿಳಿಯುತ್ತದೆ.
ಮೂತ್ರಉರಿಯ ಲಕ್ಷಣಗಳು ಮತ್ತು ಮೂತ್ರದಲ್ಲಿ iಟಿಜಿeಛಿಣoಟಿ (UಖಿI) ಎರಡೂ ಒಂದೇ ತರಹ ಲಕ್ಷಣಗಳನ್ನು ಹೊಂದಿರುತ್ತವೆ.
ಇಂಟರ್ ಸ್ಟಿಶಿಯಲ್ ಸಿಸ್ಟ್ಟಿಸ್
ಯು.ಟಿ.ಐ ನಲ್ಲಿ ಏನೇನು ಲಕ್ಷಣಗಳು ಕಂಡು ಬರುತ್ತವೆಯೋ ಅವೆಲ್ಲ ಲಕ್ಷಣಗಳು ಇಂಟರ್ ಸ್ಟಿಶಿಯಲ್ ಸಿಸ್ಟ್ಟಿಸ್ ಇದ್ದ ಹಾಗೆಯೇ ಗೋಚರಿಸುತ್ತವೆ. ಆದರೆ ಯೂರಿನ್ ಕಲ್ಚರ್ ಮಾಡಿದಾಗ ಅದರಲ್ಲಿ ಯಾವುದೇ ಸೋಂಕು ಇರುವುದು ಕಂಡು ಬರುವುದಿಲ್ಲ.

ರೋಗಿಯ ಲಕ್ಷಣಗಳನ್ನು ಆದರಿಸಿ ಮೂತ್ರಕೋಶದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಕಂಡುಕೊಳ್ಳಲು ಸ್ಕ್ಯಾನಿಂಗ್ ಮಾಡುತ್ತಾರೆ. ಬಳಿಕ ಸಿಸ್ಟೋಸ್ಕೋಪಿಯ ಮುಖಾಂತರ ಮೂತ್ರಕೋಶದ ಪರೀಕ್ಷೆ ಮಾಡುತ್ತಾರೆ. ಇಂಟರ್ ಸ್ಟಿಶಿಯಲ್ ಸಿಸ್ಟ್ಟಿಸ್ ಸಮಸ್ಯೆ ಇದ್ದರೆ ಮೂತ್ರಕೋಶದಲ್ಲಿ ಕೆಂಪು ಚುಕ್ಕೆಗಳು ಗೋಚರಿಸುತ್ತವೆ.

ಹಿಸ್ಟಮಿನ್ ಕೆಮಿಕಲ್ ನಿಂದಾಗಿ ಮೂತ್ರಕೋಶದ ಉರಿ ಹೆಚ್ಚುತ್ತದೆ. ಒತ್ತಡಮಯ ಜೀವನ ಶೈಲಿ ಹಾಗೂ ಜೆನೆಟಿಕ್ ಕಾರಣದಿಂದಾಗಿಯೂ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ.

ಯಾರಿಗೆ ಈ ಸಮಸ್ಯೆ :
ಮೆನೋಪಾಸ್ ಬಳಿಕವೇ ಈ ಸಮಸ್ಯೆ ಹೆಚ್ಚು. ಆದರೆ ೩೫ -೪೫ ವಯಸ್ಸಿನ ಮಹಿಳೆಯರಲ್ಲೂ ಇದು ಗೋಚರಿಸಬಹುದು.

ಚಿಕಿತ್ಸೆ :
ಲಕ್ಷಣಗಳನ್ನು ಆದರಿಸಿ, ಮೊದಲು ವೈದ್ಯರು ಅನೇಕ ಬಗೆಯ ಪರೀಕ್ಷೆಗಳನ್ನು ನಡೆಸುತ್ತಾರೆ. ಔಷಧಿ ಚಿಕಿತ್ಸೆಗೆ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಹೈಡ್ರೋಡಿಸ್ಟನ್ಶನ್ ವಿಧಾನದಲ್ಲಿ ಕೆತೆಟರ್ ಮೂಲಕ ಔಷಧಿತುಂಬಿ ಮೂತ್ರಕೋಶವನ್ನು ಹಿಗ್ಗಿಸಲಾಗುತ್ತದೆ.ಇದರಿಂದ ನೋವಿರುವ ಭಾಗದಲ್ಲಿ ಒತ್ತಡ ಉಂಟಾಗಿ ಆ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಇನ್ನೊಂದು ಬಗೆಯ ಚಿಕಿತ್ಸೆ ಎಂದರೆ , ಸಿಸ್ಟೋಸ್ಕೋಪಿ ವಿಧಾನದ ಮೂಲಕ ಕೆಂಪು ಗುರುತುಗಳು ಕಂಡು ಬಂದ ಸ್ಥಳದಲ್ಲಿ ಬೊಟ್ಯಾಕ್ಸ್ ಚುಚ್ಚುಮದ್ದು ಕೊಡಲಾಗುತ್ತದೆ. ಇದರ ಪ್ರಭಾವ ೬ ತಿಂಗಳಿನಿಂದ ೧ ವರ್ಷದ ತನಕ ಇರುತ್ತದೆ.

ಈ ವಿಧಾನವನ್ನು ಜನರಲ್ ಅನಸ್ಥೇಶಿಯಾ ಮುಖಾಂತರ ಮಾಡಬೇಕಾಗುತ್ತದೆ. ಹೀಗಾಗಿ ರೋಗಿ ಖಾಲಿ ಹೊಟ್ಟೆಯಲ್ಲಿ ಬರಬೇಕಾಗುತ್ತದೆ. ಅರ್ಧಗಂಟೆಯೊಳಗೆ ಈ ಪ್ರಕ್ರಿಯೆ ಮುಗಿಯುತ್ತದೆ. ೫-೬ ಗಂಟೆಯೊಳಗೆ ಮಹಿಳೆ ಮನೆಗೆ ತೆರಳಬಹುದು.
ಇಷ್ಟೆಲ್ಲಾ ವಿಧಾನ ಗಳನ್ನು ಅನುಸರಿಸಿದ ಬಳಿಕ ನೋವು ಮತ್ತೆ ಮರುಕಳಿಸದಿರಲು ಜೀವನ ಶೈಲಿಯಲ್ಲ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಚಹ , ಕಾಪಿ , ಇವುಗಳ ಪ್ರಮಾಣ ಕಡಿಮೆ ಗೊಳಿಸಬೇಕು. ಸಿಗರೇಟು, ಆಲ್ಕೋಹಾಲ್ ಅಬ್ಯಾಸ ವಿದ್ದರೆ ಅವುಗಳಿಗೆ ಖಾಯಂ ಆಗಿ ಗುಡ್ ಬೈ ಹೇಳಬೇಕು. ನೀರು ಸಾಕಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು. ಬ್ಲಾಡರ್ ರಿಲ್ಯಾಕ್ಸ ಮಾಡಲು ಪೆಲಿಕ್ ಪ್ಲೋರ್ ಮಜಲ್ಸ್‌ಎಕ್ಸ್ ಸೈಜ್‌ಕೂಡ ಮಾಡಬೇಕಾಗುತ್ತದೆ. ಮೂತ್ರ ಉರಿಯ ಸಮಸ್ಯೆಗಳನ್ನು ನೀಗಿಸಿಕೊಂಡು ದೈನಂದಿನ ಜೀವನವನ್ನು ಸುಗಮ ಗೊಳಿಸಿಕೊಳ್ಳಬಹುದು.
ಆಲ್ಟಿಯಸ್ ಲ್ಯಾಪ್ರೋಸ್ಕೊಪಿಕ್ ಸೆಂಟರ್
#೯೧೫, ೧ನೇ ಮಹಡಿ, ಧನುಷ್ ಪ್ಲಾಜಾ, ಐಡಿಯಲ್ ಹೋಮ್ಸ್ ಟೌನ್‌ಶಿಪ್, ಗೋಪಾಲನ್ ಮಾಲ್ ಸಮೀಪ, ರಾಜರಾಜೇಶ್ವರಿನಗರ, ಬೆಂಗಳೂರು-೫೬೦೦೯೮. ೦೮೦-೨೮೬೦೬೭೮೯

ಆಲ್ಟಿಯಸ್ ಹಾಸ್ಪಿಟಲ್, ನಂ. ೬/೬೩ ೫೯ನೇ ಅಡ್ಡರಸ್ತೆ,
೪ನೇ ಬ್ಲಾಕ್ ,ರಾಜಾಜಿನಗರಎಂಟ್ರೆನ್ಸ್, ಎಂ.ಇ.ಐ ಪಾಲಿಟೆಕ್ನಿಕ್‌ಎದುರು,
ರಾಮಮಂದಿರದ ಹತ್ತಿರ, ಬೆಂಗಳೂರು-೫೬೦೦೧೦. ೯೯೦೦೦೩೧೮೪೨/೨೩೧೫೧೮೭೩

Leave a Comment